ಲಕ್ನೋ: ಉತ್ತರ ಪ್ರದೇಶದಲ್ಲಿ ಇದುವರೆಗೆ ಒಟ್ಟಾಗಿ ರಾಜಕಾರಣ ಮಾಡಿದ ತಂದೆ-ಮಗ ಇನ್ನು ಪ್ರತ್ಯೇಕ ಪಕ್ಷ ಕಟ್ಟಿಕೊಂಡು ಆಡಳಿತ ನಡೆಸಲಿದ್ದಾರೆ. ಎಸ್ ಪಿ ಎಂಬ ಪ್ರಬಲ ರಾಜಕಕೀಯ ಪಕ್ಷವೊಂದು ಈ ಮೂಲಕ ವಿಭಜನೆಯಾಗುತ್ತಿದೆ.
ಮಾಜಿ ಸಿಎಂ ಮುಲಾಯಂ ಸಿಂಗ್ ಯಾದವ್ ಸಹೋದರ ಶಿವಪಾಲ್ ಯಾದವ್ ಪ್ರತ್ಯೇಕ ಪಕ್ಷ ಸ್ಥಾಪಿಸುತ್ತಿರುವುದಾಗಿ ಘೋಷಿಸಿಕೊಂಡಿದ್ದು, ಇದಕ್ಕೆ ಮುಲಾಯಂ ಅವರೇ ನಾಯಕರಾಗಲಿದ್ದಾರೆ ಎಂದು ಘೋಷಿಸಿದ್ದಾರೆ. ಸಮಾಜವಾದಿ ಸೆಕ್ಯುಲರ್ ಮೋರ್ಚಾ ಎಂದು ಹೊಸ ಪಕ್ಷದ ಹೆಸರು.
ಈ ಸಂದರ್ಭದಲ್ಲಿ ಅಖಿಲೇಶ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಪಾಲ್, ಅಖಿಲೇಶ್ ಯಾದವ್ ತಮ್ಮ ಪಕ್ಷವನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ ಎಂದಿದ್ದಾರೆ. ಇದು ಮುಲಾಯಂ ಅವರ ಕಳೆದುಹೋದ ಗೌರವ ಮರಳಿ ಪಡೆಯುವುದಕ್ಕಾಗಿ ಸ್ಥಾಪಿಸುತ್ತಿರುವ ಪಕ್ಷ ಎಂದು ಶಿವಪಾಲ್ ಸ್ಪಷ್ಟನೆ ನೀಡಿದ್ದಾರೆ.
ಚುನಾವಣೆ ಮುಗಿದ ಮೇಲೆ ಮುಲಾಯಂಗೆ ಪಕ್ಷ ಹಸ್ತಾಂತರಿಸುತ್ತೇನೆ ಎಂದಿದ್ದ ಅಖಿಲೇಶ್ ಮಾತು ತಪ್ಪಿದರು. ನಾವು ಎಸ್ ಪಿ ಪಕ್ಷವನ್ನು ಬಲಪಡಿಸುತ್ತಿದ್ದೆವು ಎಂದು ಅವರು ದೂರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ