ಅಹಮದಾಬಾದ್ : ಗುಜರಾತ್ ನ ವಾಸ್ತಾದಲ್ಲಿ ವ್ಯಕ್ತಿಯೊಬ್ಬನಿಗೆ ಆತನ ಸ್ನೇಹಿತರು ಸೇರಿ ಲೈಂಗಿಕ ಕಿರುಕುಳ ನೀಡಿದ್ದಾರೆ.
ರಾತ್ರಿ ವೇಳೆ 40 ವರ್ಷದ ಸಂತ್ರಸ್ತ ತನ್ನ ಮೂವರು ಸ್ನೇಹಿತರ ಜೊತೆ ಕುಳಿತಿದ್ದಾಗ ಆತನಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಆತನ ಬಟ್ಟೆಗಳನ್ನು ಹರಿದು ವಿಡಿಯೋ ಮಾಡಿ ಅದನ್ನು ಬೇರೆಯವರಿಗೆ ಕಳುಹಿಸಿದ್ದಾರೆ. ಈ ಘಟನೆಯಿಂದ ಸಂತ್ರಸ್ತ ವ್ಯಕ್ತಿಯ ಆರೋಗ್ಯ ಹದಗೆಟ್ಟ ಕಾರಣ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಅಲ್ಲಿ ಆತ ಮೂವರು ಆರೋಪಿ ಸ್ನೇಹಿತರ ವಿರುದ್ಧ ಪೊಲಿಸರಿಗೆ ದೂರು ನೀಡಿದ್ದಾನೆ. ಮೂವರ ವಿರುದ್ಧ ಅಸ್ವಾಭಾವಿಕ ಲೈಂಗಿಕತೆಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎನ್ನಲಾಗಿದೆ.