Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಡೆಂಘೀ, ಚಿಕುನ್ ಗುನ್ಯಾಗೆ ಬೆಚ್ಚಿ ಬಿದ್ದ ರಾಜಧಾನಿ

ಡೆಂಘೀ, ಚಿಕುನ್ ಗುನ್ಯಾಗೆ ಬೆಚ್ಚಿ ಬಿದ್ದ ರಾಜಧಾನಿ
ನವದೆಹಲಿ , ಮಂಗಳವಾರ, 20 ಜೂನ್ 2017 (15:09 IST)
ಮಳೆಗಾಲ ಆರಂಭವಾದರೂ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮಾರಕ ಚಿಕುನ್ ಗುನ್ಯಾ, ಡೆಂಘಿ ಹಾವಳಿ ನಿಂತಿಲ್ಲ. ಸಾಂಕ್ರಾಮಿಕ ರೋಗಾಣುಗಳ ಚಟುವಟಿಕೆಯ ಸೀಸನ್ ಡಿಸೆಂಬರ್`ಗೆ ಅಂತ್ಯವಾದರೂ ಸೋಂಕು ಮಾತ್ರ ನಿಂತಿಲ್ಲ. ದೆಹಲಿಯಲ್ಲಿ 150ಕ್ಕೂ ಅಧಿಕ ಚಿಕುನ್ ಗುನ್ಯಾ ಪ್ರಕರಣಗಳು ಪತ್ತೆಯಾಗಿವೆ.

ಚಿಕುನ್ ಗುನ್ಯಾ ರೋಗವನ್ನ ತಡಯುವ ನಿಟ್ಟಿನಲ್ಲಿ ಸಂಪೂರ್ಣ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಆದೇಶಿಸಿದ್ದು, ಮನೆಗಳ ಮುಂದೆ ಸೊಳ್ಳೆ ಬೆಳವಣಿಗೆಗೆ ಕಾರಣವಾಗುವ ನೀರಿನ ಸಂಗ್ರಹಗಳ ಬಗ್ಗೆ ಸಂಪೂರ್ಣ ಮೇಲ್ವಿಚಾರಣೆ ನಡೆಸಲಾಗುತ್ತಿದೆ.

ಈ ಮಧ್ಯೆ, 87 ಡೆಂಗ್ಯೂ ಪ್ರಕರಣಗಳು ಸಹ ದಾಖಲಾಗಿದ್ದು, ರಾಜಧಾನಿ ಜನತೆ ಬೆಚ್ಚಿಬೀಳುವಂತೆ ಮಾಡಿದೆ. 146 ಚಿಕುನ್ ಗುನ್ಯಾ ಕೇಸ್`ಗಳಲ್ಲಿ ಮೇನಲ್ಲಿ 10, ಏಪ್ರಿಲ್`ನಲ್ಲಿ 19, ಮಾರ್ಚ್`ನಲ್ಲಿ 34, ಜನವರಿ ಮತ್ತು ಫೆಬ್ರವರಿಯಲ್ಲಿ 33 ಪ್ರಕರಣಗಳು ದಾಖಲಾಗಿವೆ.

ಜೂನ್ ತಿಂಗಳಲ್ಲೇ 10 ಡೆಂಗ್ಯೂ ಪ್ರಕರಣಗಳು, ಮೇನಲ್ಲಿ 8 ಕೇಸ್`ಗಳು ದಾಖಲಾಗಿವೆ. ಮೇನಲ್ಲಿ ಉನ್ನತಮಟ್ಟದ ಸಭೆ ಕರೆದಿದ್ದ ಸಿಎಂ ಕೇಜ್ರಿವಾಲ್ ಗಂಭೀರ ಚರ್ಚೆ ನಡೆಸಿದ್ದರು. . ಈ ಬಗ್ಗೆ ಟ್ವಿಟ್ ಮಾಡಿರುವ ಕೇಜ್ರಿವಾಲ್, ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳಿಂದ ನಗರ ಜರ್ಜರಿತವಾಗಿದೆ. ಸೊಳ್ಳೆ ಮುಕ್ತ ನಗರವನ್ನಾಗಿ ಮಾಡಲು ಕ್ರಮ ಕೈಗೊಂಡಿದ್ದು, ಜನರ ಚಳುವಳಿಯಾಗಿಸುವುದಾಗಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಅಬ್ಬಾ..! ಕಾರಿನಲ್ಲಿ ಇತ್ತು 10 ಅಡಿ ಉದ್ದದ ಕಾಳಿಂಗ ಸರ್ಪ..