Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಿವಿ ಉಪಕುಲಪತಿಗೆ ಬೆದರಿಕೆ: ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು

ವಿವಿ ಉಪಕುಲಪತಿಗೆ ಬೆದರಿಕೆ: ವಿದ್ಯಾರ್ಥಿಗಳ ವಿರುದ್ಧ ಪ್ರಕರಣ ದಾಖಲು
ನವದೆಹಲಿ , ಗುರುವಾರ, 9 ಮಾರ್ಚ್ 2017 (16:43 IST)
ದೆಹಲಿಯಲ್ಲಿರುವ ಜೆಎನ್‌ಯು ವಿಶ್ವವಿದ್ಯಾಲಯ ಸದಾ ಸುದ್ದಿಯಲ್ಲೇ ಇರುತ್ತದೆ. ಮತ್ತೀಗ ಈ ವಿವಿಯ ಕೆಲವು ವಿದ್ಯಾರ್ಥಿಗಳು ಉಪಕುಲಪತಿಗೆ ಬೆದರಿಕೆ ಒಡ್ಡಿದ್ದು ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. 
ಫೆಬ್ರವರಿ 27ರಂದು ನಡೆದ ಪ್ರತಿಭಟನೆಯ ಬಳಿಕ ಕೆಲ ವಿದ್ಯಾರ್ಥಿಗಳು ಉಪಕುಲಪತಿಯನ್ನು ಭೇಟಿಯಾಗಲು ಅವರ ಕಚೇರಿ ಬಳಿ ಬಂದಿದ್ದಾರೆ. ಆದರೆ ಅವರ ಆರೋಗ್ಯ ಸರಿಯಿರಲಿಲ್ಲವಾದ್ದರಿಂದ ಭೇಟಿಗೆ ಅವಕಾಶ ನೀಡಲಾಗಿಲ್ಲ. ಅಷ್ಟರಲ್ಲಿ ಅನಾರೋಗ್ಯಪೀಡಿತ ಉಪಕುಲಪತಿಯವರ ಚಿಕಿತ್ಸೆಗೆ ವೈದ್ಯರು ಸಹ ಸ್ಥಳಕ್ಕೆ ಆಗಮಿಸಿದ್ದಾರೆ.ಆದರೆ ಅವರನ್ನು ತಡೆದ ವಿದ್ಯಾರ್ಥಿಗಳು ಚಿಕಿತ್ಸೆಗೆ ಅಡ್ಡಿ ಪಡಿಸಿದ್ದಾರೆ. ಉಪಕುಲಪತಿಯವರನ್ನು ಅವರ ಕಚೇರಿಯಲ್ಲಿಯೇ ಕೂಡಿ ಹಾಕಿ ಬೆದರಿಕೆ ಹಾಕಿದ್ದಾರೆ.
 
ಮರುದಿನ ಮತ್ತೆ ವಿದ್ಯಾರ್ಥಿಗಳು ವಿಸಿ ಭೇಟಿಗೆ ಆಗ್ರಹಿಸಿದ್ದು, ಭೇಟಿಗೆ ಅವಕಾಶ ನೀಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಿದ್ಯಾರ್ಥಿನಿಯೋರ್ವಳು ಬೆದರಿಕೆ ಹಾಕಿದ್ದಾಳೆ.
 
ಈ ಕುರಿತು ಫೆಬ್ರವರಿ 5 ರಂದು ದೂರು ದಾಖಲಾಗಿತ್ತು. ಆದರೆ ವಿಚಾರಣೆ ನಡೆಸಿದ ಪೊಲೀಸರು  ಬುಧವಾರ ದೂರು ದಾಖಲಿಸಿಕೊಂಡಿದ್ದಾರೆ.
 
ಐಪಿಸಿ ವಿಭಾಗ  341/342/504/34 ಅನ್ವಯ ದೂರು ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು: "ಅಮ್ಮ"ನ ಕ್ಷೇತ್ರದಲ್ಲಿ ಏ.12 ರಂದು ವೋಟಿಂಗ್