Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ದಿನಕರನ್`ಗೆ ಮಧ್ಯರಾತ್ರಿ ದೆಹಲಿ ಪೊಲೀಸರ ಸಮನ್ಸ್

ದಿನಕರನ್`ಗೆ ಮಧ್ಯರಾತ್ರಿ ದೆಹಲಿ ಪೊಲೀಸರ ಸಮನ್ಸ್
ಚೆನ್ನೈ , ಗುರುವಾರ, 20 ಏಪ್ರಿಲ್ 2017 (08:13 IST)
ಶಶಿಕಲಾ ಸೋದರಳಿಯ ಟಿಟಿವಿ ದಿನಕರನ್ ವಿರುದ್ಧ ದೆಹಲಿ ಪೊಲೀಸರು ಮತ್ತೊಂದು ಸಮನ್ಸ್ ಜಾರಿಮಾಡಿದ್ದಾರೆ. ಪಕ್ಷದ ಚಿಹ್ನೆಗಾಗಿ ಲಂಚ ನೀಡಿದ ಆರೋಪ ಪ್ರಕರಣದಲ್ಲಿ ಶನಿವಾರ ದೆಹಲಿಯ ಅಂತರ್ ರಾಜ್ಯ ಕ್ರೈಂ ಬ್ರಾಂಚ್ ಕಚೇರಿಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್`ನಲ್ಲಿ ಸುಚಿಸಲಾಗಿದೆ.
 

ಪನ್ನೀರ್ ಸೆಲ್ವಂ ಮತ್ತು ಪಳನಿ ಸ್ವಾಮಿ ಬಣಗಳ ವೀಲಿನಕ್ಕಾಗಿ ಪಕ್ಷದ ಹಿತದೃಷ್ಟಿಯಿಂದ ದಿನಕರನ್ ಮತ್ತು ಶಶಿಕಲಾ ಪಕ್ಷದ ಕಾರ್ಯಚಟುವಟಿಕೆಯಿಂದ ಹೊರಗುಳಿಯುವುದಾಗಿ ಘೊಷಿಸಿದ ಕೆಲ ಗಂಟೆಗಳಲ್ಲೇ ಮಧ್ಯರಾತ್ರಿ ದಿನಕರನ್`ಗೆ ಸಮನ್ಸ್ ಜಾರಿಯಾಗಿದೆ.

ಪಕ್ಷದ ಚಟುವಟಿಕೆಯಿಂದ ಹೊರಗುಳಿಯುವ ಘೋಷಣೆಗೂ ಮುನ್ನ ಪಕ್ಷದ ಶಾಸಕರು ಮತ್ತು ಜಿಲ್ಲಾ ಕಾರ್ಯದರ್ಶಿಗಳ ಸಭೆ ಕರೆದು ಬಲಪ್ರದರ್ಶನಕ್ಕೆ ದಿನಕರನ್ ಮುಂದಾಗಿದ್ದರು. ಆದರೆ, ಆಪ್ರಯತ್ನ ಫಲ ನೀಡಲಿಲ್ಲ. ಹೀಗಾಗಿ, ದಿನಕರನ್ ಉಲ್ಟಾ ಹೊಡೆದಿದ್ದಾರೆ.

ಆರ್.ಕೆ. ನಗರ ಉಪಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಿಕೆ ಆರೋಪ,ಐಟಿ ದಾಳಿ ವೇಳೆ ಸಿಕ್ಕ ದಾಖಲೆಗಳಿಂದಾಗಿ ಪಕ್ಷದಲ್ಲಿ ದಿನಕರನ್ ವಿರುದ್ಧ ಆಕ್ರೋಶ ಭುಗಿಲೆದ್ದಿತ್ತು. ಇತ್ತೀಚೆಗೆ ಪಕ್ಷದ ಚಿಹ್ನೆಗಾಗಿ ಲಂಚ ನೀಡಿಕೆ ಪ್ರಕರಣ ಬಯಲಾದ ಬಳಿಕವಂತೂ ಆಂತರಿಕ ಬೇಗುದಿ ಕಟ್ಟೆ ಒಡೆದಿತ್ತು.

 

Share this Story:

Follow Webdunia kannada

ಮುಂದಿನ ಸುದ್ದಿ

ಎಚ್.ಡಿ. ಕುಮಾರಸ್ವಾಮಿ ಮೇಲೆ ನೋಟಿನ ದಾಳಿ