ದೇಶದ ಭದ್ರತೆಗೆ ಸಂಬಂಧಪಟ್ಟ ದಾಖಲೆ ಆರೋಪ ಹೊಂದಿದ ಆರೋಪದ ಮೇಲೆ ಪಾಕ್ ಹೈ ಕಮಿಷನ್‌ನ ಅಧಿಕಾರಿ ಮತ್ತು ಇತರ ನಾಲ್ವರನ್ನು ಬಂಧಿಸಿ ವಿಚಾರಣೆಗೊಳಪಡಿಸಿ ಬಿಡುಗಡೆ ಮಾಡಲಾಗಿದೆ.
ಅಬ್ದುಲ್ ಬಸಿತ್ ಕಚೇರಿ ಸಿಬ್ಬಂದಿ ವರ್ಗದಲ್ಲಿರುವ ಮೊಹಮ್ಮದ್ ಅಕ್ತರ್ (35) ಮತ್ತು ಇತರರು ಪಾಕ್ ಬೇಹುಗಾರಿಕಾ ಸಂಸ್ಥೆ ಐಎಸ್ಐ ಪರ ಕೆಲಸ ಮಾಡುತ್ತಿದ್ದಾರೆ ಎಂಬ ಆಘಾತಕಾರಿ ಸತ್ಯ ಹೊರಬಿದ್ದಿದೆ.
ರಾಯಭಾರಿಗಳನ್ನು ಒಂದೇ ಬಾರಿ ಬಂಧಿಸಲು ಸಾಧ್ಯವಾಗಿಲ್ಲ. ಅವರಿಗೆ ಬಂಧನ ಮತ್ತು ಕ್ರಿಮಿನಲ್ ಆರೋಪ ಹೇರಿಕೆಗಳ ಮೇಲಿಂದ ವಿನಾಯತಿ ಇರುತ್ತದೆ. ಹೀಗಾಗಿ ಅವರ ಬಳಿ ಇದ್ದ ಅತ್ಯುನ್ನತ ರಹಸ್ಯದ ರಕ್ಷಣಾ ದಾಖಲೆಗಳು, ನಕ್ಷೆಗಳು ಮತ್ತು ಬಲ ನಿಯೋಜನೆ ವಿವರಗಳನ್ನೊಳಗೊಂಡ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ರಾಜತಾಂತ್ರಿಕ ಅಧಿಕಾರಿಗಳು ಕೇವಲ ರಾಜತಾಂತ್ರಿಕತೆಯನ್ನು ಮಾಡಬೇಕು. ಹೊರತು ಯಾವುದೇ ಗೂಢಾಚಾರಿಕೆಯನ್ನು ನಡೆಸಬಾರದು. ಅಕ್ತರ್ ಮತ್ತು ಇನ್ನುಳಿದ ಮೂವರು ಗೂಢಾಚಾರಿಕೆ ಮಾಡುತ್ತಿದ್ದಾರೆ ಎಂದು ಗುಪ್ತಚರ ಇಲಾಖೆ ದೆಹಲಿ ಕ್ರೈಂ ಬ್ರಾಂಚ್ ಪೊಲೀಸರಿಗೆ ಸೂಚನೆಯನ್ನು ನೀಡಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಅಕ್ತರ್ ಮತ್ತು ಇತರ ಮೂವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.
ಕ್ರೈಂ ವಿಭಾಗದ ಪೊಲೀಸರು ಈ ಕುರಿತಂತೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಮತ್ತು ಉಪರಾಜ್ಯಪಾಲ ನಜೀಬ್ ಜಂಗ್ ಅವರಿಗೆ ಮಾಹಿತಿ ನೀಡುತ್ತಿದ್ದಾರೆ.
ಈ ಕುರಿತು ಕಚೇರಿಗೆ ಬಂದು ಸ್ಪಷ್ಟನೆ ನೀಡುವಂತೆ ವಿದೇಶಾಂಗ ಇಲಾಖೆ ಹೈ ಕಮಿಷನರ್ ಅಬ್ದುಲ್ ಬಸಿತ್‌ಗೆ ಸಮನ್ಸ್ ನೀಡಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ