Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಂದೆ ಹತ್ಯೆ, ತಾಯಿಗೆ ಹಲ್ಲೆ; 11 ಪೊಲೀಸರನ್ನು ಗಾಯಗೊಳಿಸಿ ಹತ್ಯೆಯಾದ

ತಂದೆ ಹತ್ಯೆ, ತಾಯಿಗೆ ಹಲ್ಲೆ; 11 ಪೊಲೀಸರನ್ನು ಗಾಯಗೊಳಿಸಿ ಹತ್ಯೆಯಾದ
ನವದೆಹಲಿ , ಸೋಮವಾರ, 9 ಜನವರಿ 2017 (11:26 IST)
ದೇಶವನ್ನೇ ಬೆಚ್ಚಿ ಬೀಳಿಸುವ ಭೀಕರ ಘಟನೆಯೊಂದು ಪೂರ್ವದೆಹಲಿಯಲ್ಲಿ ನಡೆದಿದ್ದು ಪಾಪಿ ಪುತ್ರನೋರ್ವ ತಂದೆಯನ್ನು ಭೀಕರವಾಗಿ ಹತ್ಯೆಗೈದು ತಾಯಿಯ ಮೇಲೆ ಹಲ್ಲೆಗೈದಿದ್ದಲ್ಲದೇ ಸಿಲಿಂಡರ್ ಸ್ಪೋಟಿಸಿ ಮನೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಸ್ಥಳೀಯರಿಂದಲೇ ಆತ ಕೊಲೆಯಾಗಿದ್ದಾನೆ. 

ಭಾನುವಾರ ರಾಷ್ಟ್ರ ರಾಜಧಾನಿಯ ಮಧು ವಿಹಾರದಲ್ಲಿರುವ ಅಜಂತಾ ಅಪಾರ್ಟಮೆಂಟ್‌ನಲ್ಲಿ ಈ ಘಟನೆ ನಡೆದಿದ್ದು ಘಟನೆಯಲ್ಲಿ 11 ಪೊಲೀಸ್ ಸಿಬ್ಬಂದಿ ಸೇರಿದಂತೆ 13 ಮಂದಿ ಗಾಯಗೊಂಡಿದ್ದಾರೆ.
 
ಘಟನೆ ವಿವರ: ಭಾನುವಾರ ಮಧ್ಯಾಹ್ನ ಈ ಕರಾಳ ಕೃತ್ಯ ನಡೆದಿದ್ದು, ರಾಹುಲ್ ಮತಾ (30) ಎಂಬಾತ ತನ್ನ ತಂದೆ ಆರ್ಥಿಕ ವಲಯದ ನಿವೃತ್ತ ನೌಕರ  ಆರ್.ಪಿ. ಮತಾ ಅವರನ್ನು ಚಾಕುವಿನಿಂದ ಚುಚ್ಚಿ ಬರ್ಬರವಾಗಿ ಕೊಲೆಗೈದಿದ್ದಾನೆ. ತಾಯಿ ರೇಣು ಮತಾ ಪತಿಯನ್ನು ರಕ್ಷಿಸಲು ಬಂದಾಗ ಆಕೆಯ ಮೇಲೂ ಸಹ ಹಲ್ಲೆ ನಡೆಸಿದ್ದಾನೆ. ಮನೆಯಲ್ಲಿ ನಡೆಯುತ್ತಿರುವ ಗಲಾಟೆ ಕೇಳಿ ನೆರೆಹೊರೆಯವರು ಮತ್ತು ಹೌಸಿಂಗ್ ಸೊಸೈಟಿಯ ಭದ್ರತಾ ಸಿಬ್ಬಂದಿ ಸ್ಥಳಕ್ಕೋಡಿ ಬಂದಿದ್ದಾರೆ. ಅವರು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. 
 
ಕಟ್ಟಡದ ನಾಲ್ಕನೇ ಮಹಡಿಯಲ್ಲಿರುವ ಮಾತಾ ನಿವಾಸಕ್ಕೆ ಪೊಲೀಸರು ತಲುಪಿದ್ದಂತೆ ಆರೋಪಿ ಅಡುಗೆ ಕೋಣೆಯಲ್ಲಿ ಕದ ಹಾಕಿಕೊಂಡು ಗ್ಯಾಸ್ ಸಿಲಿಂಡರ್‌ಗೆ ಬೆಂಕಿ ಹಚ್ಚಿ ಸ್ಪೋಟಿಸಿದ್ದಾನೆ. ಪರಿಣಾಮ ರಾಹುಲ್, ಒಬ್ಬ ನೆರೆಮನೆಯಾತ ಮತ್ತು 11 ಪೊಲೀಸರು ಗಾಯಗೊಂಡಿದ್ದಾರೆ.
 
ಗಾಯಗೊಂಡರೂ ಲೆಕ್ಕಿಸದೇ ಪೊಲೀಸರು ಆತನನ್ನು ಬಂಧಿಸಲು ಯತ್ನಿಸಿದ್ದಾರೆ. ಆದರೆ ನೆರೆಹೊರೆಯವರು ಆತನನ್ನು ಹಿಡಿದು ಥಳಿಸಿ ಕೊಂದು ಹಾಕಿದ್ದಾರೆ. 
 
ಮೃತ ಆರೋಪಿ ರಾಹುಲ್ ಅಪರಾಧಿಕ ಹಿನ್ನೆಲೆ ಹೊಂದಿದ್ದು ಕಳೆದ ವರ್ಷ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ನಾಲ್ಕು ದಿನ ತಿಹಾರ್ ಜೈಲಿನಲ್ಲಿದ್ದ.  ಆಸ್ತಿವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಹೇಳಲಾಗುತ್ತದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕಾಂಗ್ರೆಸ್ ನಾಯಕನ ಮೇಲೆ ಬಿಜೆಪಿ ಶಾಸಕನ ಪುತ್ರಿಯ ಡೆಡ್ಲಿ ಅಟ್ಯಾಕ್!