Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಶ್ರೀಸಾಮಾನ್ಯನೊಬ್ಬನಿಗೆ ಇದ್ದಕ್ಕಿದ್ದಂತೆ ತಾನು 13 ಕಂಪನಿಗಳ ಒಡೆಯ ಎಂದು ಗೊತ್ತಾದರೆ ಹೇಗಾಗಬೇಡ?!

ಶ್ರೀಸಾಮಾನ್ಯನೊಬ್ಬನಿಗೆ ಇದ್ದಕ್ಕಿದ್ದಂತೆ ತಾನು 13 ಕಂಪನಿಗಳ ಒಡೆಯ ಎಂದು ಗೊತ್ತಾದರೆ ಹೇಗಾಗಬೇಡ?!
ನವದೆಹಲಿ , ಸೋಮವಾರ, 27 ಆಗಸ್ಟ್ 2018 (10:10 IST)
ನವದೆಹಲಿ: ಅನೂಜ್ ಕುಮಾರ್ ಎಂಬ ಈ ದೆಹಲಿ ನಿವಾಸಿಯ ಮಾಸಿಕ ವೇತನ ಕೇವಲ 25000 ರೂ. ಓಡಿಸುತ್ತಿದ್ದುದು ವೇಗನ್ ಆರ್ ಕಾರು. ಆದರೆ ಇದ್ದಕ್ಕಿದ್ದ ಹಾಗೆ ಈ ವ್ಯಕ್ತಿಗೆ ತಾನು 13 ಕಂಪನಿಗಳ ಒಡೆಯ ಎಂಬ ಸತ್ಯ ಗೊತ್ತಾದರೆ ಹೇಗಾಗಬೇಡ?

ಇಂತಹದ್ದೊಂದು ಘಟನೆ ನಡೆದಿರುವುದು ದೆಹಲಿಯಲ್ಲಿ. ಅನೂಜ್ ಕುಮಾರ್ ಎಂಬಾತನ ಪ್ಯಾನ್ ಕಾರ್ಡ್ ನಂಬರ್ ಬಳಸಿ 13 ಬೇನಾಮಿ ಕಂಪನಿಗಳು ಅಸ್ಥಿತ್ವದಲ್ಲಿತ್ತು. ಆದರೆ ವಿಚಿತ್ರ ನೋಡಿ, ಈತನಿಗೆ ಈ ಬಗ್ಗೆ ಅರಿವೇ ಇರಲಿಲ್ಲ. ತನ್ನ ಪ್ಯಾನ್ ನಂಬರ್ ಬಳಸಿ ನಡೆದಿದ್ದ ವಂಚನೆ ಪೊಲೀಸರು ಹೇಳಿದ ಮೇಲೆಯೇ ಈತನಿಗೆ ಗೊತ್ತಾಗಿದ್ದು.

ಅದೂ ಭಾರತದಲ್ಲಿ ಮಾತ್ರವಲ್ಲ, ಸಿಂಗಾಪುರ್ ಮುಂತಾದ ವಿದೇಶದಲ್ಲೂ ಬೇನಾಮಿ ಸಂಸ್ಥೆ ಸ್ಥಾಪಿಸಲಾಗಿದ್ದು, ಕೋಟ್ಯಂತರ ರೂಪಾಯಿ ವ್ಯವಹಾರ ಮಾಡಲಾಗುತ್ತಿದೆ. ಕಳೆದ ಜನವರಿ ತಿಂಗಳಲ್ಲಿ ತೆರಿಗೆ ಇಲಾಖೆ ಅನೂಜ್ ಹೆಸರಿಗೆ ನೋಟಿಸ್ ನೀಡಿದಾಗಲೇ ತನ್ನ ಪ್ಯಾನ್ ನಂಬರ್ ದುರ್ಬಳಕೆಯಾಗುತ್ತಿದೆ ಎನ್ನುವುದು ಆತನಿಗೆ ಗೊತ್ತಾಗಿದ್ದು. ತಕ್ಷಣ ದೆಹಲಿ ಪೊಲೀಸರಿಗೆ ಅನೂಜ್ ದೂರು ದಾಖಲಿಸಿದ್ದರು. ಜಗತ್ತಿನಲ್ಲಿ ಎಂತೆಂತಹಾ ಮೋಸಗಳು ನಡೆಯುತ್ತಿವೆ ನೋಡಿ..!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯನ್ನು ಕೊಂದು ತನ್ನನ್ನು ರಕ್ಷಿಸಿಕೊಳ್ಳಲು ಈ ಪತಿ ಮಹಾಶಯ ಎಂಥಾ ಖತರ್ನಾಕ್ ಐಡಿಯಾ ಮಾಡಿದ್ದ ಗೊತ್ತಾ?!