ಕುಡಿಯಲು ನೀರು ತಂದಿಟ್ಟಿಲ್ಲವೆಂದು ಪಾನಮತ್ತ ಮಗನೊಬ್ಬ ತನ್ನ ತಂದೆಯನ್ನು ಹತ್ಯೆಗೈದ ಅಮಾನವೀಯ ಘಟನೆ ಪಶ್ಚಿಮ ದೆಹಲಿಯ ಬಿಂದಾಪುರ್‌ನಲ್ಲಿ ನಡೆದಿದೆ.
ರಾಮ್ ಕುಮಾರ್ (75) ಕೊಲೆಯಾದ ದುರ್ದೈವಿಯಾಗಿದ್ದು, ಆರೋಪಿ ಚೇತನ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಆಟೋಚಾಲಕನಾಗಿರುವ ಚೇತನ್ ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಬರುವಾಗ ಕಂಠಪೂರ್ತಿ ಕುಡಿದಿದ್ದ. ಈ ಸಂದರ್ಭದಲ್ಲಿ ನೀರು ಕುಡಿಯಲು ಕೊಡವನ್ನು ನೋಡಿದಿದ್ದಾನೆ. ಆದರೆ ಅದರಲ್ಲಿ ನೀರಿರಲಿಲ್ಲ.
ಕೋಪಗೊಂಡ ಆತ ನೀರನ್ನು ತುಂಬಿಟ್ಟಿಲ್ಲವೆಂದು ತಂದೆಯನ್ನು ಮನಬಂದಂತೆ ಥಳಿಸಿದ್ದಾನೆ.
ಗಂಭೀರವಾಗಿ ಗಾಯಗೊಂಡ ರಾಮಕುಮಾರ್‌ನನ್ನು ನೆರೆಹೊರೆಯವರು ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಿದರು.ಆದರೆ ಆತ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.