Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಂಪು ಪಾನೀಯ ಕುಡಿಸಿ ಯುವತಿಯ ಮೇಲೆ ರೇಪ್

ತಂಪು ಪಾನೀಯ ಕುಡಿಸಿ ಯುವತಿಯ ಮೇಲೆ ರೇಪ್
ನವದೆಹಲಿ , ಶುಕ್ರವಾರ, 24 ಮೇ 2019 (17:47 IST)
ಯುವತಿಯೊಬ್ಬಳಿಗೆ ಮತ್ತು ಬರಿಸುವ ತಂಪು ಪಾನೀಯ ಕುಡಿಸಿ ಅತ್ಯಾಚಾರವೆಸಗಿದ ಹೇಯ ಘಟನೆ ವರದಿಯಾಗಿದ್ದು, ಆರೋಪಿ ಸೆಕ್ಯೂರಿಟಿ ಗಾರ್ಡ್‌ನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. 
ದೆಹಲಿಯ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿರುವ ಯುವತಿಗೆ ಅದೇ ಕಾಲೇಜಿನ ಭದ್ರತಾ ಸಿಬ್ಬಂದಿಯೊಬ್ಬ ಇಂತಹ ಕುಕೃತ್ಯ ಎಸಗಿರುವುದು ಬಹಿರಂಗವಾಗಿದೆ. ಇದೀಗ ಕಾಲೇಜಿನ ಭದ್ರತಾ ಸಿಬ್ಬಂದಿ ಮೇಲೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ಯುವತಿಗೆ ಪರಿಚಿತನಾಗಿದ್ದ ಭದ್ರತಾ ಸಿಬ್ಬಂದಿಯೊಬ್ಬ ಮತ್ತುಬರಿಸುವ ತಂಪು ಪಾನೀಯ ನೀಡಿದ್ದಾನೆ. ಆಕೆ ತಂಪು ಪಾನೀಯ ಕುಡಿಯುತ್ತಿದ್ದಂತೆ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಕೆಲ ಸಮಯದ ನಂತರ ಪ್ರಜ್ಞೆ ಮರಳಿದಾಗ ನಗ್ನಾವಸ್ಥೆಯಲ್ಲಿರುವುದು ಕಂಡು ಅನುಮಾನವಾಗಿದೆ. ಕೂಡಲೇ ಅಲ್ಲಿಂದ ತೆರಳಿ ಪೊಲೀಸರಿಗೆ ಘಟನೆಯ ಬಗ್ಗೆ ದೂರು ನೀಡಿದ್ದಾಳೆ. 
 
ಕಾಲೇಜಿನ ಸಿಸಿಟಿವಿಗಳನ್ನು ಪರಿಶೀಲಿಸಿದ ಪೊಲೀಸರಿಗೆ ಭದ್ರತಾ ಸಿಬ್ಬಂದಿಯ ಹೇಯ ಕೃತ್ಯ ಕಂಡು ಬಂದಿದ್ದರಿಂದ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ತಳ್ಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share this Story:

Follow Webdunia kannada

ಮುಂದಿನ ಸುದ್ದಿ

JDS ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡೋದಿಲ್ಲ ಎಂದ ವಿಶ್ವನಾಥ್