Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾಯುಮಾಲಿನ್ಯ: ದೆಹಲಿಯ 1740 ಶಾಲೆಗಳಿಗೆ ರಜೆ

ವಾಯುಮಾಲಿನ್ಯ: ದೆಹಲಿಯ 1740 ಶಾಲೆಗಳಿಗೆ ರಜೆ
ನವದೆಹಲಿ , ಶನಿವಾರ, 5 ನವೆಂಬರ್ 2016 (11:43 IST)
ನವದೆಹಲಿಯಲ್ಲಿ ವಾಯುಮಾಲಿನ್ಯ ವಿಪರೀತ ಹೆಚ್ಚಿರುವುದರಿಂದ 1740 ಶಾಲೆಗಳಿಗೆ ರಜೆ ಘೋಷಿಸಲಾಗಿದೆ.

 
ದೀಪಾವಳಿ ಹಬ್ಬ ಕಳೆದು ದಿನಗಳೇ ಉರುಳಿದರೂ ರಾಷ್ಟ್ರ ರಾಜಧಾನಿಯಲ್ಲಿ ವಾಯುಮಾಲಿನ್ಯ ತಗ್ಗುತ್ತಿಲ್ಲ. ನಗರದಲ್ಲಿ ವಾಯುಮಾಲಿನ್ಯ ವಿಪರೀತ ಹೆಚ್ಚಾಗಿರುವುದರಿಂದ ಮಕ್ಕಳಿಗೆ ಅಸ್ತಮಾ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ. ಹೀಗಾಗಿ ಎಲ್ಲ ಶಾಲೆಗಳಿಗೆ ರಜೆ ಘೋಷಿಸಲಾಗಿದೆ 
 
ನಿನ್ನೆ ಕೂಡ ಕೆಲ ಖಾಸಗಿ ಶಾಲೆಗಳು ವಿದ್ಯಾರ್ಥಿಗಳ ಆರೋಗ್ಯದ ದೃಷ್ಟಿಯಿಂದ ರಜೆಯನ್ನು ಘೋಷಿಸಿದ್ದವು. 
ಇಂದು ಕೂಡ ನಗರದಲ್ಲಿ ದಟ್ಟವಾದ ಮಂಜು ಕವಿದ ವಾತಾವರಣ ಮುಂದುವರೆದಿದೆ. 
 
ರಾಜಧಾನಿಯಲ್ಲಿ  ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಯಾರು ಹೊಣೆ ಎಂದು ರಾಷ್ಟ್ರೀಯ ನ್ಯಾಯಾಧೀಕರಣ ರಾಜ್ಯ ಹಾಗೂ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
 
ಪರಷ್ಪರ ದೋಷಾರೋಪಣೆ ಮಾಡಿಕೊಳ್ಳುತ್ತ ಎರಡು ಸರ್ಕಾರಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿವೆ ಎಂದು ಗುಡುಗಿದೆ. 
 
ನಮ್ಮ ಮುಂದಿನ ಪೀಳಿಗೆಗೆ  ನಾವೇನು ನೀಡುತ್ತಿದ್ದೇವೆ ಎಂಬುದರ ಕಡೆ ಚಿತ್ತ ಹರಿಸಿ. ರಾಜಧಾನಿಯಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ನಿರ್ಮಾಣವಾಗಿದೆ. 10 ವರ್ಷಗಳಷ್ಟು ಹಳೆಯ ವಾಹನಗಳನ್ನು ರಸ್ತೆಗಿಳಿಸಲು ಬಿಡಬೇಡಿ ಎಂಬ ಆದೇಶ ಸರಿಯಾಗಿ ಪಾಲನೆಯಾಗಿಲ್ಲ. ಇದು ಕೇವಲ ಕೃಷಿ ತ್ಯಾಜ್ಯ ಸುಡುವುದರಿಂದ ಬರುವ ಹೊಗೆಯಲ್ಲ ಎಂದು ಹರಿಸು ನ್ಯಾಯಾಧೀಕರಣ ಮುಖ್ಯಸ್ಥ ಸ್ವತಂತ್ರಕುಮಾರ್ ಹೇಳಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ 9 ಜನ ಸೇರಿ 14 ಬಲಿ