ಮಿತ್ರಪಕ್ಷವಾದ ಶಿವಸೇನೆಯ ಟೀಕೆಗಳಿಂದ ಅಸಮಾಧಾನಗೊಂಡಿರುವ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್, ಬಿಜೆಪಿಯೊಂದಿಗೆ ಮೈತ್ರಿ ಮುಂದುವರಿಸಿಬೇಕೋ ಅಥವಾ ಬೇಡವೋ ಎನ್ನುವ ಬಗ್ಗೆ ಶಿವಸೇನೆ ನಿರ್ಧರಿಸಲಿ ಎಂದು ಗುಡುಗಿದ್ದಾರೆ.
ಶಿವಸೇನೆ ನಮ್ಮ ಎಲ್ಲಾ ನಿರ್ಧಾರಗಳನ್ನು ವಿರೋಧಿಸುತ್ತದೆ. ಮಿತ್ರಪಕ್ಷವಾಗಿ ಸಲಹೆಗಳನ್ನು ಕೊಡಬಹುದು. ಒಂದೇ ಬಾರಿಗೆ ಅಧಿಕಾರರೂಢ ಪಕ್ಷವಾಗಿ ಮತ್ತೊಂದು ಕಡೆ ವಿಪಕ್ಷವಾಗಿ ಕಾರ್ಯನಿರ್ವಹಿಸುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆಯವರಾಗಲಿ, ಉದ್ಭವ ಠಾಕ್ರೆಯವರಾಗಲಿ ಸರಕಾರದ ಪ್ರತಿಯೊಂದು ನಿರ್ಧಾರವನ್ನು ಋಣಾತ್ಮಕವಾಗಿ ಪರಿಗಣಿಸಿಲ್ಲ. ಆದರೆ, ಶಿವಸೇನೆ ಪಕ್ಷದ ಕೆಲ ಮುಖಂಡರು ತಾವು ಪಕ್ಷದ ಮುಖ್ಯಸ್ಥ ಮತ್ತು ಪಕ್ಷಕ್ಕಿಂತ ದೊಡ್ಡವರು ಎಂದು ಭಾವಿಸಿದ್ದಾಗಿ ಆರೋಪಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಅಲೆ ಮಾಸತೊಡಗಿದ್ದು, ಕಾಂಗ್ರೆಸ್ ಪಕ್ಷದ ಉಪಾಧ್ಯಕ್ಷ ರಾಹುಲ್ ಗಾಂಧಿ ದೇಶವನ್ನು ಮುನ್ನಡೆಸುವ ಸಾಮರ್ಥ್ಯ ಹೊಂದಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ನೀಡಿದ ಹೇಳಿಕೆ ರಾಜಕೀಯದಲ್ಲಿ ಕೋಲಾಹಲ ಸೃಷ್ಟಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.