ಆಫ್ಘಾನಿಸ್ತಾನದ ರಾಜಧಾನಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಸರಣಿ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 103ಕ್ಕೆ ಏರಿಕೆ
ಅಮೆರಿಕದ ಸೈನಿಕರನ್ನು ಗುರಿಯಾಗಿಸಿಕೊಂಡು ಎರಡು ಕಡೆ ಬಾಂಬ್ ಸ್ಫೋಟಗೊಂಡಿದ್ದು, ಘಟನೆಯಲ್ಲಿ 13 ಅಮೆರಿಕದ ಯೋಧರು, 18 ವಿವಿಧ ಸೇವೆಗೆ ನಿಯೋಜಿಸಿದ್ದ ಯೋಧರು ಸೇರಿದಂತೆ 103 ಮಂದಿ ಮೃತಪಟ್ಟಿದ್ದು, 143ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.ಯಾಗಿದ್ದು, ದಾಳಿಯ ಹೊಣೆಯನ್ನು ಐಎಸ್ ಸಂಘಟನೆ ಹೊತ್ತುಕೊಂಡಿದೆ.
ದಾಳಿಯ ಹೊಣೆಯಲ್ಲಿ ಇಸ್ಲಾಮಿಕ್ ಸಂಘಟನೆ ಹೊತ್ತುಕೊಂಡಿದ್ದು, ದಾಳಿಗೂ ಮುನ್ನ ಆತ್ಮಾಹುತಿ ದಳದ ಉಗ್ರ ಸಂಘಟನೆಯ ಬ್ಯಾನರ್ ಜೊತೆ ತೆಗೆಸಿಕೊಂಡ ಫೋಟೋವನ್ನು ಬಿಡುಗಡೆ ಮಾಡಿದೆ.
ದಾಳಿಯಲ್ಲಿ ಮಕ್ಕಳು ಅಲ್ಲದೇ ತಾಲಿಬಾನ್ ಉಗ್ರರು ಕೂಡ ಮೃತಪಟ್ಟಿದ್ದಾರೆ. ಅಮೆರಿಕದ ಯೋಧರು ಆಗಸ್ಟ್ 31ರೊಳಗೆ ಆಫ್ಘಾನಿಸ್ತಾನ ತೆರವುಗೊಳಿಸಬೇಕು ಎಂದು ತಾಲಿಬಾನ್ ಸೂಚನೆ ನೀಡಿತ್ತು.
ಕಾಬೂಲ್ ನಲ್ಲಿ ಪ್ರಸ್ತುತ 5200 ಅಮೆರಿಕಾದ ಯೋಧರು ನೆಲೆಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೆಲವು ಸೆಕೆಂಡ್ ಗಳ ಅಂತರದಲ್ಲಿ ಎರಡು ಬಾಂಬ್ ಸ್ಫೋಟಗೊಂಡಿದ್ದು, ನಂತರ ಕೆಲವು ಗಂಟೆಗಳ ಅಂತರದಲ್ಲಿ ಮತ್ತೊಂದಿಷ್ಟು ಬಾಂಬ್ ಗಳು ಸ್ಫೋಟಗೊಂಡವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.