ದೇಶಾದ್ಯಂತ ಹೆಚ್ಚಿನ ರಾಜಕಾರಣಿಗಳು ಇತ್ತೀಚಿಗೆ ನಡೆಸಿದ ಸೀಮಿತ ದಾಳಿಯ ಸಾಕ್ಷ್ಯವನ್ನು ತೋರಿಸಿ ಎಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸುತ್ತಿದ್ದರೆ, ಯೋಗ ಗುರು ಬಾಬಾ ರಾಮದೇವ್, ಭಾರತವೀಗ ಭಯೋತ್ಪಾದನೆ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂ ಕಡೆ ಗಮನ ನೀಡಬೇಕು ಎಂದು ಹೇಳಿದ್ದಾರೆ.
ರಾಷ್ಟ್ರೀಯ ಸುದ್ದಿ ಮಾಧ್ಯಮವೊಂದರ ಜತೆ ಮಾತಾಡುತ್ತಿದ್ದ ಬಾಬಾ ರಾಮದೇವ್ ಅವರಿಗೆ ಗಡಿಯಲ್ಲಿ ಉಗ್ರವಾದವನ್ನು ಮುನ್ನಡೆಸುತ್ತಿರುವ ಉಗ್ರ ನಾಯಕರ ಬಗ್ಗೆ ಕೇಳಲಾಗಿ, ನಮ್ಮ ಮುಂದಿನ ಗುರಿ ಹಫೀಜ್ ಸಯೀದ್ ಮತ್ತು ದಾವೂದ್ ಇಬ್ರಾಹಿಂ. ಅವರನ್ನು ಜೀವಂತವಾಗಿ ಹಿಡಿದು ತರುವ ಅವಶ್ಯಕತೆ ಇಲ್ಲ. ಅವರಿಬ್ಬರಿಗೆ ಮೋಕ್ಷವನ್ನು ನೀಡಬೇಕು. ಅವರಿಬ್ಬರ ಸಾವು ಸಂಪೂರ್ಣ ಜಗತ್ತಿಗೆ ಶಾಂತಿಯನ್ನು ತರಲಿದೆ. ಜತೆಗೆ ಈ ಕಾರ್ಯವನ್ನು ಸಂಪನ್ನಗೊಳಿಸಿದ್ದಕ್ಕೆ ಮೋದಿ ಅವರು ಸದಾಕಾಲ ನೆನೆಯಲ್ಪಡುತ್ತಾರೆ ಎಂದು ಬಾಬಾ ತಿಳಿಸಿದ್ದಾರೆ.
ಸೈನ್ಯ ನಡೆಸಿದ ಸೀಮಿತ ದಾಳಿಗೆ ಸಂಪೂರ್ಣ ಬೆಂಬಲವನ್ನು ವ್ಯಕ್ತ ಪಡಿಸುತ್ತ ಪ್ರಥಮ ಬಾರಿ ಭಾರತ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡಿದೆ ಎಂದಿದ್ದಾರೆ.
ಪಾಕಿಸ್ತಾನ ಪ್ರಾಮಾಮಿಕವಾಗಿದ್ದರೆ ಸೀಮಿತ ದಾಳಿ ನಡೆದ ದೀನ ಅಂತರಾಷ್ಟ್ರೀಯ ಪತ್ರಕರ್ತರನ್ನು ಸ್ಥಳಕ್ಕೆ ಕರೆತರಬೇಕಾಗಿತ್ತು. ಕಾರ್ಯಾಚರಣೆ ನಡೆದ ಸ್ಥಳವನ್ನು ಸ್ವಚ್ಛಗೊಳಿಸಿ, ಉಗ್ರರ ಶವಗಳನ್ನು ಸಮಾಧಿ ಮಾಡಿದ ಬಳಿಕವಲ್ಲ ಎಂದು ಬಾಬಾ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ