Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ವಾರ್ಧಾ ಎಫೆಕ್ಟ್: 12 ಸಾವು, 20,000ಕ್ಕೂ ಹೆಚ್ಚು ಮರಗಳು ಧರೆಗೆ

ವಾರ್ಧಾ ಎಫೆಕ್ಟ್: 12 ಸಾವು, 20,000ಕ್ಕೂ ಹೆಚ್ಚು ಮರಗಳು ಧರೆಗೆ
, ಮಂಗಳವಾರ, 13 ಡಿಸೆಂಬರ್ 2016 (12:12 IST)
ಸೋಮವಾರ ಅಪ್ಪಳಿಸಿದ ಭೀಕರ ಚಂಡಮಾರುತಕ್ಕೆ ತಮಿಳುನಾಡು ರಾಜಧಾನಿ ಚೆನ್ನೈ ತತ್ತರಿಸಿದ್ದು ಮೃತಪಟ್ಟವರ ಸಂಖ್ಯೆ 12ಕ್ಕೇರಿದೆ. ಚೆನ್ನೈ ಮಹಾನಗರದಲ್ಲಿ 4 , ಕಾಂಚಿಪುರಂನಲ್ಲಿ 2 ಜನರು ಸಾವನ್ನಪ್ಪಿದ್ದಾರೆ. 20000 ಹೆಚ್ಚು ಮರಗಳು ಧರೆಗುರುಳಿವೆ ಎಂದು ಅಂದಾಜಿಸಲಾಗಿದೆ.
ಚೆನ್ನೈ, ಕಾಂಚೀಪುರಂ, ತಿರುವಳ್ಳೂರಿನಲ್ಲಿ ನಿನ್ನೆ ಮುಂಜಾನೆಯಿಂದ ವಿದ್ಯುತ್ ಸಂಪರ್ಕವನ್ನು ಸ್ಥಗಿತಗೊಳಿಸಲಾಗಿದ್ದು ಜನರ ಪರದಾಟ ಮುಗಿಲು ಮುಟ್ಟಿದೆ. ಇನ್ನೂ 2 ದಿನ ಭಾರಿ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು ಜನರಿಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. 
 
300 ನಿರಾಶ್ರಿತ ಶಿಬಿರಗಳಲ್ಲಿ 11,000 ಹೆಚ್ಚು ಜನರಿಗೆ ಆಶ್ರಯವನ್ನು ಕಲ್ಪಿಸಲಾಗಿದೆ. 
 
ಸಂಚಾರ ಅಸ್ತವ್ಯಸ್ತವಾಗಿದ್ದು 312 ರಸ್ತೆಗಳು ಬಂದ್ ಆಗಿವೆ. ಚೆನ್ನೈ ನಗರದಾದ್ಯಂತ ನೆಲಕ್ಕುರುಳಿರುವ ಭಾರಿ ಗಾತ್ರದ ಮರಗಳನ್ನು ತೆರವುಗೊಳಿಸಿ ರಸ್ತೆ ಸಂಚಾರ ಸುಗಮಗೊಳಿಸುವ ಕಾರ್ಯ ಭರದಿಂದ ಸಾಗಿದೆ. ಬಸ್, ಆಟೋ ಸಂಚಾರ ನಿಧಾನವಾಗಿ ಸುಗಮವಾಗುತ್ತಿದ್ದು ನಗರ ಸಹಜ ಸ್ಥಿತಿಗೆ ಮರಳುತ್ತಿದೆ. 
 
ಸುಮಾರು 55ಕ್ಕಿಂತ ಹೆಚ್ಚಿನ ಗುಡಿಸಲುಗಳು ನಾಶವಾಗಿದ್ದು ರೈಲು ಮತ್ತು ವಿಮಾನ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. 
 
ಮೃತರ ಕುಟುಂಬಗಳಿಗೆ ತಲಾ 4 ಲಕ್ಷ ಪರಿಹಾರ ನೀಡುವುದಾಗಿ ಸಿಎಂ ಪನೀರ್ ಸೆಲ್ವಂ ಘೋಷಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಯೋಧನ ಮೇಲೆ ಗುಂಡು ಹಾರಿಸಿದ ಪಾಪಿ ತಂದೆ!