ನವದೆಹಲಿ : ಕೊರೊನಾಗೆ ಔಷಧಿ ಬಿಡುಗಡೆ ಮಾಡಿದ ಪತಂಜಲಿ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.
ಪತಂಜಲಿ ಸಂಸ್ಥೆಇತ್ತೀಚೆಗೆ ಕೊರೊನಾಗೆ ಔಷಧಿ ಬಿಡುಗಡೆ ಮಾಡಿ, ಇದರಿಂದ ಸೋಂಕಿತರು ಶೇ.100ರಷ್ಟು ಗುಣಮುಖರಾಗುತ್ತಾರೆ. 5ರಿಂದ 14 ದಿನದ ಅವಧಿಯಲ್ಲಿ ಗುಣಮುಖರಾಗುತ್ತಾರೆ ಎಂದು ಹೇಳಿದೆ.
ಈ ಬಗ್ಗೆ ಸಾಮಾಜಿಕ ಕಾರ್ಯಕರ್ತರೊಬ್ಬರು, ಪತಂಜಲಿ ಸಂಸ್ಥೆ ಈ ರೀತಿ ಹೇಳುವುದರ ಮೂಲಕ ಜನರನ್ನು ಅಪಾಯಕ್ಕೆ ತಳ್ಳುತ್ತಿದೆ ಎಂದು ಆರೋಪಿಸಿ ಸಂಸ್ಥೆಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣವನ್ನು ಕೈಗೆತ್ತಿಕೊಂಡಿರುವ ನ್ಯಾಯಾಲಯವು ಜೂನ್ 30ಕ್ಕೆ ವಿಚಾರಣೆಯನ್ನು ಮುಂದೂಡಿದೆ.