ಮೊಘಲರ ಕಾಲದಲ್ಲೂ ರೋ ರಕ್ಷಣೆ ಮಾಡಲಾಗುತ್ತಿತ್ತು, ಗೋ ಹತ್ಯೆ ನಿಷೇಧಕ್ಕೆ ಎಲ್ಲ ರಾಜ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಅಗತ್ಯವಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.
ಮೊಘಲ್ ದೊರೆಗಳಾದ ಬಹದ್ದೂರ್ ಶಾ ಜಾಫರ್ ಅಕ್ಬರ್, ಜಹಂಗೀರ್ ಕಾಲದಲ್ಲೂ ಗೋ ಹತ್ಯೆಯನ್ನು ನಿಷೇಧಿಸಲಾಗಿತ್ತು. ಗೋಹತ್ಯೆಯನ್ನು ನಿಷೇಧಿಸದಿದ್ದರೆ ಹಿಂದೂಸ್ತಾನವನ್ನು ಆಳಲಾಗದು ಎಂದು 'ಬಾಬರ್‌ನಾಮಾ'ದಲ್ಲೂ ಬರೆಯಲಾಗಿದೆ, ಎಂದು ರಾಜನಾಥ್ ತಿಳಿಸಿದ್ದಾರೆ.
ಈ ಕುರಿತಂತೆ ಜಾಗೃತಿ ಉಂಟು ಮಾಡಿರುವ ಪರಿಣಾಮ ಅನೇಕ ರಾಜ್ಯಗಳು ಈಗಾಗಲೇ ಗೋ ಹತ್ಯೆ ನಿಷೇಧವನ್ನು ಜಾರಿಗೆ ತಂದಿವೆ. ಈ ಕುರಿತಂತೆ ಎಲ್ಲ ರಾಜ್ಯಗಳ ವಿಶ್ವಾಸ ತೆಗೆದುಕೊಳ್ಳುವ ಅಗತ್ಯವಿದೆ ಎಂದಿದ್ದಾರೆ ಸಿಂಗ್.
ಗೋ ಬಗ್ಗೆ ಹೇಳುವುದಾದರೆ ಇದು ಕೇವಲ ನಮ್ಮ ಸಂಸ್ಕೃತಿ ವಿಷಯವಷ್ಟೇ ಅಲ್ಲ. ಇದು ನಮ್ಮ ನಂಬಿಕೆಯ ಪ್ರಶ್ನೆ. ನಂಬಿಕೆಯ ವಿಷಯವಾಗಿರುವುದುನ್ನು ಹೊರತು ಪಡಿಸಿ ಇದನ್ನು ಆರ್ಥಿಕ, ಐತಿಹಾಸಿಕ ಮತ್ತು ವೈಜ್ಞಾನಿಕ ದೃಷ್ಟಿಯಿಂದ ಕೂಡ ನೋಡುವ ಅಗತ್ಯವಿದೆ, ಎಂದು ಸಿಂಗ್ ಅಭಿಪ್ರಾಯ ಪಟ್ಟಿದ್ದಾರೆ.
ಬಾಂಗ್ಲಾದೇಶಕ್ಕೆ ದನಗಳ ಸಾಗಾಟವನ್ನು ಸಂಪೂರ್ಣವಾಗಿ ತಡೆಹಿಡಿಯುವ ಕುರಿತು ಎನ್‌ಡಿಎ ಸರ್ಕಾರ ಕಾರ್ಯ ನಿರ್ವಹಿಸುತ್ತಿದೆ. ಈ ದಿಶೆಯಲ್ಲಿ ಅನೇಕ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಗಡಿ ತುಂಬ ಉದ್ದವಿರುವುದರಿಂದ ಕೇವಲ " ಭಾಗಶಃ ಯಶಸ್ಸು" ದೊರಕಿದೆ ಎಂದು ಕೇಂದ್ರ ಸಚಿವರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ