ಲಕ್ನೋ: ನದಿಗಳಿಂದಲೂ ಕೊರೋನಾ ಹರಡುವ ಭಯ ಈಗ ಉತ್ತರ ಪ್ರದೇಶ ಮತ್ತು ಬಿಹಾರದ ಗಂಗಾ ನದಿ ತೀರದ ನಿವಾಸಿಗಳಿಗೆ ಶುರುವಾಗಿದೆ.
ಇದಕ್ಕೆ ಕಾರಣ ಇವೆರಡೂ ರಾಜ್ಯಗಳನ್ನು ಸಂಪರ್ಕಿಸುವ ಗಂಗಾ ನದಿ ತಟದಲ್ಲಿ ಕೊರೋನಾ ರೋಗಿಗಳ ಮೃತದೇಹಗಳು ತೇಲಿಕೊಂಡು ಬರುತ್ತಿವೆ. ಈ ಮೃತದೇಹಗಳಿಂದ ಕೊರೋನಾ ಹರಡಬಹುದೇ ಎಂಬ ಆತಂಕ ಸ್ಥಳೀಯರಲ್ಲಿ ಮನೆ ಮಾಡಿದೆ.
ಆದರೆ ಕೆಲವು ತಜ್ಞರ ಪ್ರಕಾರ ಕೊಳೆತ ಶವಗಳಿಂದ ಕೊರೋನಾ ಹರಡುವ ಸಾಧ‍್ಯತೆ ಕಡಿಮೆ. ಹಾಗಿದ್ದರೂ ಸ್ಥಳೀಯರು ಈಗ ಈ ನದಿ ನೀರು ಉಪಯೋಗಿಸಲು ಹಿಂಜರಿಯುವಂತಾಗಿದೆ. ಅಲ್ಲದೆ, ಈ ವಿಚಾರ ಈಗ ಎರಡೂ ರಾಜ್ಯಗಳ ನಡುವೆ ಸಂಘರ್ಷಕ್ಕೂ ಕಾರಣವಾಗಿದೆ. ಮೂಲಗಳ ಪ್ರಕಾರ ಸುಮಾರು 70 ಕ್ಕೂ ಹೆಚ್ಚು ಮೃತದೇಹಗಳ ಅವಶೇಷಗಳು ಪತ್ತೆಯಾಗಿವೆ.