ನವದೆಹಲಿ: ಜಾರ್ಖಂಡ್ ನ ನ್ಯಾಯಾಲಯವೊಂದು ವ್ಯಾಟ್ಸಪ್ ಕರೆಯಲ್ಲೇ ಆರೋಪಿಗಳ ವಿಚಾರಣೆ ಮಾಡಿದ್ದಕ್ಕೆ ಸುಪ್ರೀಂಕೋರ್ಟ್ ಕೆಂಡಾಮಂಡಲವಾಗಿದೆ.
2006 ರಲ್ಲಿ ನಡೆದ ದೊಂಬಿ ಪ್ರಕರಣಕ್ಕೆ ಸಂಬಂಧಿಸಿದ ವಿಶೇಷ ಪ್ರಕರಣವೊಂದರ ವಿಚಾರಣೆಯನ್ನು ಜಾರ್ಖಂಡ್ ನ ನ್ಯಾಯಾಲಯ ವ್ಯಾಟ್ಸಪ್ ಮೂಲಕ ಮಾಡಿತ್ತು.
ಇದನ್ನು ತೀವ್ರವಾಗಿ ಆಕ್ಷೇಪಿಸಿರುವ ಸುಪ್ರೀಂಕೋರ್ಟ್ ಇದೇನು ತಮಾಷೆ ಮಾಡ್ತಿದ್ದೀರಾ? ಇದು ನ್ಯಾಯಾಲಯದ ಘನತೆಗೆ ಕುಂದು ತರುವ ವಿಚಾರ ಎಂದು ತರಾಟೆಗೆ ತೆಗೆದುಕೊಂಡಿದೆ. ಈ ವಿಚಾರವನ್ನು ಪ್ರಕರಣದ ಆರೋಪಿಗಳಲ್ಲೊಬ್ಬರಾದ ಮಾಜಿ ಸಚಿವ ಯೋಗೇಂದ್ರ ಎನ್ನುವವರು ಸುಪ್ರೀಂಕೋರ್ಟ್ ಗಮನಕ್ಕೆ ತಂದಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.