ಮುಂಬೈ: ಶೇರ್ ಆಟೋದಲ್ಲಿ ಸಹ ಪ್ರಯಾಣಿಕಳಾಗಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗೆ ಮುಂಬೈನ ನ್ಯಾಯಾಲಯ 6 ತಿಂಗಳ ಕಠಿಣ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿದೆ.
2019 ರಲ್ಲಿ ಘಟನೆ ನಡೆದಿತ್ತು. ತನ್ನ ಪಕ್ಕ ಕುಳಿತಿದ್ದ ಮಹಿಳೆಯ ಎದೆ ಮುಟ್ಟಿ ಆರೋಪಿ ಅಸಭ್ಯವಾಗಿ ವರ್ತಿಸಿದ್ದ. ತಕ್ಷಣವೇ ಮಹಿಳೆ ಪೊಲೀಸರಿಗೆ ದೂರು ನೀಡಿದ್ದಳು.
ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿ ಎಫ್ ಐಆರ್ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಶಿಕ್ಷೆ ಪ್ರಮಾಣ ಘೋಷಿಸಿದೆ.