Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬ್ರಿಜ್ ಭೂಷಣ್‍ಗೆ ಸಮನ್ಸ್ ಜಾರಿಗೊಳಿಸಿದ ಕೋರ್ಟ್

ಬ್ರಿಜ್ ಭೂಷಣ್‍ಗೆ ಸಮನ್ಸ್ ಜಾರಿಗೊಳಿಸಿದ ಕೋರ್ಟ್
ನವದೆಹಲಿ , ಮಂಗಳವಾರ, 11 ಜುಲೈ 2023 (15:29 IST)
ನವದೆಹಲಿ : ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಕುಸ್ತಿ ಫೆಡರೇಷನ್ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರಿಗೆ ದೆಹಲಿಯ ರೋಸ್ ಅವೆನ್ಯೂ ಕೋರ್ಟ್ ಸಮನ್ಸ್ ಜಾರಿ ಮಾಡಿದೆ.

ಸಿಂಗ್ ಮತ್ತು ಡಬ್ಲ್ಯುಎಫ್ಐನ ಅಮಾನತುಗೊಂಡ ಸಹಾಯಕ ಕಾರ್ಯದರ್ಶಿ ತೋಮರ್ ಅವರನ್ನು ಜುಲೈ 18 ರಂದು ಕೋರ್ಟ್ಗೆ ಹಾಜರಾಗುವಂತೆ ಸಮನ್ಸ್ನಲ್ಲಿ ಸೂಚಿಸಲಾಗಿದೆ. ಸಿಂಗ್ ವಿರುದ್ಧ ಮುಂದುವರಿಯಲು ಸಾಕಷ್ಟು ಸಾಕ್ಷ್ಯಾಧಾರಗಳಿವೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಹರ್ಜೀತ್ ಸಿಂಗ್ ಜಸ್ಪಾಲ್ ಅವರಿದ್ದ ಪೀಠ ಈ ಸಮನ್ಸ್ ಜಾರಿಗೊಳಿಸಿದೆ.

ಬ್ರಿಜ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಜೂನ್ 15 ರಂದು ಲೈಂಗಿಕ ಕಿರುಕುಳ, ಕ್ರಿಮಿನಲ್ ಬೆದರಿಕೆ ಆರೋಪದಲ್ಲಿ ಚಾರ್ಜ್ಶೀಟ್ ಸಲ್ಲಿಸಿದ್ದರು. ಈ ಬಗ್ಗೆ ಹಲವಾರು ಮಹಿಳಾ ಕುಸ್ತಿಪಟುಗಳಿಂದ ಕಿರುಕುಳದ ದೂರುಗಳ ಬಂದಿದ್ದವು. ಅಪ್ರಾಪ್ತರ ಮೇಲೂ ದೌರ್ಜನ್ಯ ಎಸಗಲಾಗಿದೆ ಎಂಬ ಆರೋಪದ ಮೇಲೆ ಸಿಂಗ್ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಾಡಿಕೆಗಿಂತ ಅಧಿಕ ಮಳೆ ಆರೆಂಜ್ ಅಲರ್ಟ್ ಘೋಷಣೆ