ನವದೆಹಲಿ: ಹಿಂದೊಮ್ಮೆ ಪಕೋಡಾ ಮಾರುವುದೂ ಒಂದು ಉದ್ಯೋಗವೇ ಎಂದಾಗ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪ್ರಧಾನಿ ಮೋದಿಯನ್ನು ಹಿಗ್ಗಾಮುಗ್ಗಾ ಟೀಕಿಸಿದ್ದವು. ಆದರೆ ಇದೇ ಉದ್ಯೋಗ ಇದೀಗ ಕಾಂಗ್ರೆಸ್ ಕಾರ್ಯಕರ್ತರೊಬ್ಬರ ಬಾಳಿಗೆ ಬೆಳಕಾಗಿದೆಯಂತೆ!
ಮೋದಿ ತವರೂರು ಗುಜರಾತ್ ನಿವಾಸಿಯಾಗಿರುವ ನಾರಾಯಣ್ ಭಾಯ್ ರಜಪೂತ್ ಕಾಂಗ್ರೆಸ್ ಕಾರ್ಯಕರ್ತ. ಹಿಂದಿ ಸಾಹಿತ್ಯದಲ್ಲಿ ಪದವಿ ಪಡೆದ ಇವರು ಪಕೋಡಾ ಮಾರುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಇದೀಗ ರಾಜ್ಯಾದ್ಯಂತ ಒಟ್ಟು 35 ಪಕೋಡಾ ಸೆಂಟರ್ ಗಳು ಇವರ ಒಡೆತನಲ್ಲಿವೆಯಂತೆ! ಈ ಬಗ್ಗೆ ಆಂಗ್ಲ ಮಾಧ್ಯಮವೊಂದು ಬೆಳಕು ಚೆಲ್ಲಿದೆ.
ಪ್ರಧಾನಿ ಮೋದಿ ಪಕೋಡಾ ಮಾರುವುದೂ ಒಂದು ಉದ್ಯಮ ಎನ್ನುವ ಹೇಳಿಕೆ ನೀಡಿದ ಬಳಿಕ ಅವರು ಪಕೋಡಾ ಮಾರುವ ಕೆಲಸದಲ್ಲಿ ತೊಡಗಿಸಿಕೊಂಡರಂತೆ. ನಿರುದ್ಯೋಗಿಯಾಗಿ ಕೂರುವುದಕ್ಕಿಂತ ದಿನಕ್ಕೆ 200 ರೂ. ಯಾದರೂ ಸಂಪಾದನೆ ಮಾಡಲು ಸಾಧ್ಯವಾಗುವ ಪಕೋಡಾ ಮಾರುವ ಉದ್ಯೋಗವೇ ಲೇಸು ಎಂದು ನಾರಾಯಣ್ ಖಾಸಗಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಇದೀಗ ಪ್ರತಿನಿತ್ಯ 500 ರಿಂದ 600 ಕೆಜಿ ಪಕೋಡಾ ಮಾರಿ ಲಾಭ ಗಳಿಸುತ್ತಿದ್ದಾರಂತೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.