ನವದೆಹಲಿ : ರಾಹುಲ್ ಗಾಂಧಿ ನಾಯಕತ್ವದಲ್ಲಿ ಕಾಂಗ್ರೆಸ್ ಪಕ್ಷ ಎಂದಿಗೂ ಉದ್ಧಾರವಾಗದು ಎಂದು ಮಾಜಿ ಕಾಂಗ್ರೆಸ್ ನಾಯಕ ಗುಲಾಂ ನಬಿ ಆಜಾದ್ ಹೇಳಿದ್ದಾರೆ.
ಗುಲಾಂ ನಬಿ ಆಜಾದ್ ತಮ್ಮ ರಾಜಕೀಯ ಜೀವನದ ಬಗ್ಗೆ ಬರೆದಿರುವ ಆಜಾದ್ ಕೃತಿಯಲ್ಲಿಯೂ ರಾಹುಲ್ ಗಾಂಧಿ ನಾಯಕತ್ವವನ್ನು ಟೀಕಿಸಿದ್ದಾರೆ.ರಾಹುಲ್ ಗಾಂಧಿ ನಾಯಕನೇ ಅಲ್ಲ. ಅವರಿಗೆ ಜನ ಬೆಂಬಲವಿಲ್ಲ. ಬಾಯಿ ಮುಚ್ಚಿ ಕುಳಿತವರಿಗೆ ಮಾತ್ರ ಪಕ್ಷದಲ್ಲಿ ಸ್ಥಾನ ಎಂದು ಟೀಕಿಸಿದ್ದಾರೆ.
ನಾನು ಸೇರಿದಂತೆ ಇಂದು ಹಲವು ಹಿರಿಯ ಮತ್ತು ಯುವ ರಾಜಕಾರಣಿಗಳು ಕಾಂಗ್ರೆಸ್ನಲ್ಲಿ ಇಲ್ಲದಿರುವುದಕ್ಕೆ ರಾಹುಲ್ ಗಾಂಧಿಯೇ ಮುಖ್ಯ ಕಾರಣ. 2013ರಲ್ಲಿ ಯುಪಿಎ ಸರ್ಕಾರ ತಂದಿದ್ದ ಸುಗ್ರೀವಾಜ್ಞೆಯನ್ನು ರಾಹುಲ್ ಗಾಂಧಿ ವಿರೋಧಿಸದೇ ಇದ್ದಿದ್ದರೆ ಅವರು ಸಂಸದ ಸ್ಥಾನದಿಂದ ಅನರ್ಹಗೊಳ್ಳುತ್ತಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಆಡಳಿತವನ್ನು ಮೆಚ್ಚಿಕೊಂಡ ಅಜಾದ್, ಇಂದಿರಾ, ರಾಜೀವ್ ಅವರು ಮಾಡಿದ ಕೆಲಸಗಳ ಪೈಕಿ 1/50 ಮಾಡಿದರೆ ರಾಹುಲ್ ಗಾಂಧಿ ಉದ್ಧರವಾಗಬಹುದು ಎಂದು ಹೇಳಿದರು.