ನವದೆಹಲಿ: ಪಂಚ ರಾಜ್ಯ ಚುನಾವಣೆ ಗೆಲುವಿನ ನಂತರ ಪ್ರಧಾನಿ ಮೋದಿಯವರನ್ನು ಪ್ರಭಾವಿ ನಾಯಕ ಎಂದು ಹೊಗಳಿದ ಕಾಂಗ್ರೆಸ್ ನ ಹಿರಿಯ ನಾಯಕ ಪಿ. ಚಿದಂಬರಂಗೆ ಪಕ್ಷದ ಮೂಲಗಳಿಂದ ಎಚ್ಚರಿಕೆ ರವಾನೆಯಾಗಿದೆ.
ಯಾವುದೇ ಪ್ರತಿಕ್ರಿಯೆ ನೀಡುವ ಮೊದಲು ಪರಿಸ್ಥಿತಿಯನ್ನು ಸರಿಯಾಗಿ ಅವಲೋಕಿಸಿ ನಡೆಸಿ ಎಂದು ಕಾಂಗ್ರೆಸ್ ಎಚ್ಚರಿಕೆ ನೀಡಿದೆ. ಚಿದಂಬರಂ ಇಂತಹ ಹೇಳಿಕೆ ನೀಡುವ ಮೊದಲು ಮಣಿಪುರ, ಪಂಜಾಬ್ ನ ಚುನಾವಣಾ ಫಲಿತಾಂಶದ ಕಡೆಗೊಮ್ಮೆ ನೋಡಲಿ. ಎಲ್ಲಾ ಕಡೆಯೂ ಮೋದಿ ಪ್ರಭಾವವಾಗಿದ್ದರೆ, ಈ ರಾಜ್ಯದಲ್ಲಿ ನಡೆದದ್ದು ಏನು? ಎಂದು ಕಾಂಗ್ರೆಸ್ ನಾಯಕರು ಚಿದಂಬರಂಗೆ ಪ್ರಶ್ನೆ ಮಾಡಿದ್ದಾರೆ.
ಚಿದಂಬರಂ ಹೇಳಿಕೆಯನ್ನು ಭಾರತೀಯ ಕಮ್ಯುನಿಸ್ಟ್ ಪಕ್ಷ ಕೂಡಾ ಆಕ್ಷೇಪಿಸಿದೆ. ಉತ್ತರ ಪ್ರದೇಶ ಮತ್ತು ಉತ್ತರಖಂಡದಲ್ಲಿ ಜನ ಆಡಳಿತ ಪಕ್ಷದ ವೈಖರಿಯಿಂದ ಬೇಸತ್ತು, ಬಿಜೆಪಿಗೆ ಮತ ನೀಡಿದ್ದಾರಷ್ಟೆ. ಇದರಲ್ಲಿ ಮೋದಿ ಮೋಡಿಯೇನು ಎಂದು ಸಿಪಿಐ ನಾಯಕ ಡಿ. ರಾಜ ಪ್ರಶ್ನಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ