Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮೇಘಾಲಯದಲ್ಲಿ ಗೆದ್ದರೂ ಕಾಂಗ್ರೆಸ್ ಗೆ ಗದ್ದುಗೆಯಿಲ್ಲ!

ಮೇಘಾಲಯದಲ್ಲಿ ಗೆದ್ದರೂ ಕಾಂಗ್ರೆಸ್ ಗೆ ಗದ್ದುಗೆಯಿಲ್ಲ!
ನವದೆಹಲಿ , ಸೋಮವಾರ, 5 ಮಾರ್ಚ್ 2018 (08:29 IST)
ನವದೆಹಲಿ: ತ್ರಿರಾಜ್ಯ ವಿಧಾನ ಸಭಾ ಚುನಾವಣೆಗಳ ಪೈಕಿ ಮೇಘಾಲಯದಲ್ಲಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಬಿಜೆಪಿ ದೊಡ್ಡ ಶಾಕ್ ನೀಡಿದೆ.

21 ಶಾಸಕರ ಬಲವಿದ್ದ ಕಾಂಗ್ರೆಸ್ ನಾಯಕರು ಮೊನ್ನೆಯೇ ರಾಜ್ಯ ಪಾಲರನ್ನು ಭೇಟಿಯಾಗಿ ಅಧಿಕಾರ ವಹಿಸಲು ಅವಕಾಶ ಕೇಳಿದ್ದರು. ಆದರೆ ಕಾಂಗ್ರೆಸ್ ಗೆ ಬಹುಮತವಿಲ್ಲ. ಹೀಗಾಗಿ ಎನ್ ಪಿಪಿ ಜತೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲು ಯೋಜೆನ ಹಾಕಿತ್ತು.

ಆದರೆ ಕಾಂಗ್ರೆಸ್ ಲೆಕ್ಕಾಚಾರ ಹಾಕುವ ವೇಳೆಗೆ ಇತ್ತ 4 ಸ್ಥಾನಗಳ ಬಲವುಳ್ಳ ಬಿಜೆಪಿ ಎನ್ ಪಿಪಿ ಮೈತ್ರಿ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಅಧಿಕಾರದತ್ತ ಹೆಜ್ಜೆ ಇಟ್ಟಿದೆ. ಇದು ಮತ್ತೊಮ್ಮೆ ಗೋವಾದಲ್ಲಿ ನಡೆದಿದ್ದ ವಿದ್ಯಮಾನವನ್ನು ನೆನಪಿಸಿದೆ. ಅಲ್ಲೂ ಕಾಂಗ್ರೆಸ್  ಅತೀಹೆಚ್ಚು ಸ್ಥಾನಗಳನ್ನು ಗೆದ್ದರೂ ಇತರರ ಸಹಾಯದಿಂದ ಬಿಜೆಪಿ ಅಧಿಕಾರ ವಹಿಸಿಕೊಂಡಿದೆ.

ಇದೀಗ ಮೇಘಾಲಯದಲ್ಲಿ ಅಂತಹ ಪರಿಸ್ಥಿತಿ ಬಾರದೇ ಇರಲು ಕಾಂಗ್ರೆಸ್ ನಾಯಕರು ಯತ್ನಿಸಿದರು ಅದು ಕೈ ಗೂಡಿಲ್ಲ. ಹೀಗಾಗಿ ಈಶಾನ್ಯದ ಮೂರೂ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರುತ್ತಿದೆ. ಕಾಂಗ್ರೆಸ್ ಬೆಪ್ಪಾಗಿ ಕುಳಿತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಹೆಂಡತಿಯೊಂದಿಗೆ ಜಗಳ; ಹಸುಗೂಸನ್ನು ಎದೆಗವಚಿಕೊಂಡು ತಂದೆ ಆತ್ಮಹತ್ಯೆ