ರಾಜ್ಯಸಭಾ ಸದಸತ್ವವನ್ನು ಗರಿಷ್ಠ 2 ಬಾರಿಗೆ ಸೀಮಿತಗೊಳಿಸುವ ಬಗ್ಗೆ ಕಾಂಗ್ರೆಸ್ ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಚಿಂತನಾ ಸಮಾವೇಶದಲ್ಲಿ ಚರ್ಚೆ ಆರಂಭಿಸಿದೆ.
ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ಎಂಬ ಹೊಸ ನಿಯಮ ಜಾರಿಗೆ ತರಲು ಮುಂದಾಗಿರುವ ಬೆನ್ನಲ್ಲೇ ಕಾಂಗ್ರೆಸ್ ಇದೀಗ ರಾಜ್ಯಸಭಾ ಸ್ಥಾನವನ್ನು ಕೂಡ ಗರಿಷ್ಠ ೨ ಬಾರಿಗೆ ಸೀಮಿತಗೊಳಿಸಿ ಇತರರಿಗೆ ಅವಕಾಶ ನೀಡುವ ಪ್ರಸ್ತಾಪ ಮುಂದಿಡಲಾಗಿದೆ.
ಗರಿಷ್ಠ ೨ ಬಾರಿ ರಾಜ್ಯಸಭಾ ಸ್ಥಾನ ನೀಡುವುದು ನಂತರ ಲೋಕಸಭೆಗೆ ಸ್ಪರ್ಧಿಸುವುದು ಅಥವಾ ರಾಜ್ಯಸಭೆಗೆ ೩ನೇ ಹಾಗೂ ಕೊನೆಯ ಬಾರಿಗೆ ಅವಕಾಶ ನೀಡುವ ಬಗ್ಗೆ ಕಾರ್ಯಕಾರಿ ಸಮಿತಿ ಪ್ರಸ್ತಾಪ ಮುಂದಿಟ್ಟಿದ್ದು, ಈ ಬಗ್ಗೆ ಚರ್ಚೆ ನಡೆದಿದೆ.
ಚುನಾವಣಾ ತಂತ್ರಗಾರಿಕೆ ತಜ್ಞ ಪ್ರಶಾಂತ್ ಕಿಶೋರ್ ನೀಡಿದ ಮುಂದಿನ ಲೋಕಸಭಾ ಚುನಾವಣೆಯ ತಂತ್ರಗಾರಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ತನ್ನ ನೀತಿಯನ್ನು ಬದಲಾವಣೆ ಮಾಡಿಕೊಳ್ಳಲಿದ್ದು, ಈ ನಿಟ್ಟಿನಲ್ಲಿ ಸುದೀರ್ಘ ಚರ್ಚೆ ಆರಂಭಿಸಿದೆ.