ಲಕ್ನೋ: ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ವರದಕ್ಷಿಣೆ ಹಿಂಸೆ ಅನುಭವಿಸುತ್ತಿದ್ದ ಅಸಹಾಯಕ ಮಹಿಳೆಯೊಬ್ಬರ ನೆರವಿಗೆ ಬಂದು ಮಾನವೀಯತೆ ಮೆರೆದಿದ್ದಾರೆ.
ಲಕ್ನೋದಲ್ಲಿ ಸಿಎಂ ನಡೆಸಿದ ಸಾರ್ವಜನಿಕ ಸಭೆಗೆ ಬಂದ ಮಹಿಳೆ ತನ್ನ ಅತ್ತೆ ಮನೆಯವರು ವರದಕ್ಷಿಣೆಗಾಗಿ ನಡೆಸುತ್ತಿರುವ ಕಿರುಕುಳದ ವಿವರಣೆ ನೀಡಿದ್ದಳು. 2 ಲಕ್ಷ ರೂ. ಕೊಡುವಂತೆ ಪತಿಯ ಮನೆಯವರು ಒತ್ತಾಯಿಸುತ್ತಿದ್ದಾರೆ.
ಇದಕ್ಕಾಗಿ ತನ್ನನ್ನು ಮನೆಯಿಂದ ಹೊರ ಹಾಕಿದ್ದಾರೆ. ತನಗೆ ಒಂದೂವರೆ ವರ್ಷದ ಮಗಳಿದ್ದು, ಅವಳ ಜೀವನ ನಿರ್ವಹಣೆಗೂ ಹಣ ನೀಡಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೆ ಕ್ರಮ ಕೈಗೊಂಡಿಲ್ಲ ಎಂದು ಅಳಲು ತೋಡಿಕೊಂಡಿದ್ದಳು.
ತಕ್ಷಣ ಇದಕ್ಕೆ ಸ್ಪಂದಿಸಿದ ಸಿಎಂ ಯೋಗಿ ಸ್ಥಳೀಯ ಪೊಲೀಸರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ. ಸಿಎಂ ಸೂಚಿಸಿದ ತಕ್ಷಣ ಜಾಗೃತರಾದ ಪೊಲೀಸರು ಮಹಿಳೆಯನ್ನು ಸಂಪರ್ಕಿಸಿ ಕ್ರಮಕ್ಕೆ ಮುಂದಾಗಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ