ಮುಂಬೈ: ಮಹಾರಾಷ್ಟ್ರದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿರುವ ಉದ್ಧವ್ ಠಾಕ್ರೆಗೆ ಇಂದು ವಿಶ್ವಾಸ ಮತ ಯಾಚನೆ ಪರೀಕ್ಷೆ ಎದುರಾಗಲಿದೆ.
ಎನ್ ಸಿಪಿ ಮತ್ತು ಕಾಂಗ್ರೆಸ್ ಮೈತ್ರಿಯೊಂದಿಗೆ ಅಧಿಕಾರಕ್ಕೇರಿರುವ ಶಿವಸೇನೆಗೆ ಇಂದು ಮಹತ್ವದ ದಿನವಾಗಲಿದೆ. ಇಂದು ಮಧ್ಯಾಹ್ನ 2 ಗಂಟೆಗೆ ವಿಶ್ವಾಸ ಮತ ಪ್ರಕ್ರಿಯೆ ನಡೆಯಲಿದೆ.
ಇದಾದ ಬಳಿಕ ಮಿತ್ರ ಪಕ್ಷಗಳು ಒಮ್ಮತ ಸ್ಪೀಕರ್ ಅಭ್ಯರ್ಥಿ ಆಯ್ಕೆ ನಡೆಸಲಿವೆ. ನಾಳೆ ಸ್ಪೀಕರ್ ಆಯ್ಕೆ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ.