ನವದೆಹಲಿ: ಬಿಹಾರದಲ್ಲಿ ಉಂಟಾಗಿರುವ ರಾಜಕೀಯ ಬಿಕ್ಕಟ್ಟಿಗೆ ಸಂಧಾನ ನಡೆಸಲು ಬಂಧ ಮಿತ್ರ ಪಕ್ಷ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಗೆ ಸಿಎಂ ನಿತೀಶ್ ಕುಮಾರ್ ಖಡಕ್ ಸೂಚನೆ ಕೊಟ್ಟಿದ್ದಾರೆ.
ಭ್ರಷ್ಟಾಚಾರ ಆರೋಪ ಹೊತ್ತಿರುವ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಪರ ಯಾವುದೇ ಕಾರಣಕ್ಕೂ ವಕಾಲತ್ತು ವಹಿಸಬೇಡಿ. ಅವರು ತಕ್ಷಣಕ್ಕೆ ರಾಜೀನಾಮೆ ಕೊಡಲೇಬೇಕು ಎಂದು ನಿತೀಶ್ ರಾಹುಲ್ ಮುಂದೆ ಪಟ್ಟು ಹಿಡಿದಿದ್ದಾರೆ.
ಆಡಳಿತಾರೂಢ ಎನ್ ಡಿಎ ಕೂಟಕ್ಕೆ ಪರ್ಯಾಯವಾಗಿ ಸೃಷ್ಟಿಯಾಗಿದ್ದ ವಿರೋಧ ಪಕ್ಷಗಳ ಮಹಾಘಟಬಂಧನ ಲಾಲೂ ಮತ್ತು ಪುತ್ರ ನಿಲುವಿನಿಂದಾಗಿ ಮುರಿದು ಬೀಳುವ ಹಂತಕ್ಕೆ ಬಂದಿದೆ. ಈ ಕಾರಣಕ್ಕೆ ಮಿತ್ರ ಪಕ್ಷ ಕಾಂಗ್ರೆಸ್ ಇವರಿಬ್ಬರನ್ನು ಒಂದುಗೂಡಿಸುವ ಯತ್ನ ನಡೆಸುತ್ತಿದೆ. ಆದರೆ ತೇಜಸ್ವಿ ರಾಜೀನಾಮೆ ನೀಡದ ಹೊರತು ತಮ್ಮ ಪಟ್ಟು ಸಡಿಲವಾಗದು ಎಂದು ನಿತೀಶ್ ಖಡಕ್ಕಾಗಿ ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ