ನವದೆಹಲಿ: ದೆಹಲಿ ಸಿಎಂ ಕೇಜ್ರಿವಾಲ್ ರ ಮೇಲೆ ಕೇಂದ್ರ ಸಚಿವ ಅರುಣ್ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಪ್ರಕರಣ ದಾಖಲಿಸಿ ವಿಚಾರಣೆ ನ್ಯಾಯಾಲಯದಲ್ಲಿದೆ. ಆದರೆ ಇದರ ವಿಚಾರಣೆಗಾಗಿ ಕೇಜ್ರಿವಾಲ್ ಗೆ ವಕೀಲ ರಾಮ್ ಜೇಠ್ಮಲಾನಿಗೆ ಕೊಡಬೇಕಿರುವ 3 ಕೋಟಿ ಮೊತ್ತದ ಬಿಲ್ ಗೆ ಸರ್ಕಾರದ ಹಣ ಬಳಸಿಕೊಳ್ಳಲು ಮುಂದಾಗಿದ್ದಾರೆಂಬ ವಿವಾದವೆಬ್ಬಿದೆ.
ಐಟಿ ದಾಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್ ವಿರುದ್ಧ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಮಾನ ನಷ್ಟ ಮೊಕದ್ದಮೆ ಹೂಡಿದ್ದರು. ಈ ಮೊಕದ್ದಮೆಯ ವಿಚಾರಣೆ ನ್ಯಾಯಾಲಯದಲ್ಲಿದೆ. ಇದರ ವಿಚಾರಣೆಗಾಗಿ ಕೇಜ್ರಿವಾಲ್ ತಮ್ಮ ಪರ ವಾದ ಮಂಡಿಸಲು ಖ್ಯಾತ ವಕೀಲ ಬಿಜೆಪಿಯವರೇ ಆದ ರಾಮ್ ಜೇಠ್ಮಲಾನಿ ಅವರನ್ನು ನೇಮಿಸಿದ್ದಾರೆ. ಜೇಠ್ಮಲಾನಿ ಈ ಪ್ರಕರಣದ ವಿಚಾರಣೆಗೆ 1 ಕೋಟಿ ರೂ. ಹಾಗೂ ಪ್ರತೀ ವಿಚಾರಣೆಗೆ 3.42 ಕೋಟಿ ರೂ.ಗಳಂತೆ ಬಿಲ್ ನೀಡಿದ್ದರು.
ಈ ಬಿಲ್ ಪಾವತಿಸಲು ಹಸಿರು ನಿಶಾನೆ ತೋರುವಂತೆ ಕೇಜ್ರಿವಾಲ್ ಸರ್ಕಾರದ ಸಚಿವ ಮನೀಶ್ ಸಿಸೋಡಿಯಾ ದೆಹಲಿ ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಗೆ ಪತ್ರ ಬರೆದಿರುವುದನ್ನು ಸುದ್ದಿ ವಾಹಿನಿಯೊಂದು ವರದಿ ಮಾಡಿದೆ. ಕೇಜ್ರಿವಾಲ್ ರ ವೈಯಕ್ತಿಕ ಕಾನೂನು ಹೋರಾಟಕ್ಕೆ ಸರ್ಕಾರದ ಹಣ ಬಳಸಿಕೊಳ್ಳುವುದಕ್ಕೆ ಕಾನೂನು ಸಚಿವಾಲಯ ತಗಾದೆ ತೆಗೆದಿದೆ. ಇದೀಗ ದೆಹಲಿ ಮಹಾನಗರ ಪಾಲಿಕೆ ಚುನಾವಣೆಗೆ ಸಜ್ಜಾಗುತ್ತಿರುವ ಕೇಜ್ರಿವಾಲ್ ಗೆ ಉರುಳಾಗುವ ಸಾಧ್ಯತೆಯಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ