ಉರಿ ದಾಳಿಯ ಬಳಿಕ ಭಾರತ - ಪಾಕ್ ಸಂಬಂಧ ಸಂಪೂರ್ಣವಾಗಿ ಹದಗೆಟ್ಟಿದ್ದು ಎರಡು ದೇಶಗಳ ನಡುವಿನ ಸಂಬಂಧ ಬೂದಿ ಮುಚ್ಚಿದ ಕೆಂಡದಂತಿದೆ. ಪಾಕಿಸ್ತಾನದ ಈ ದುರ್ವರ್ತನೆಗೆ ಜಗತ್ತಿನ ಘಟಾನುಘಟಿ ರಾಷ್ಟ್ರಗಳು ಛೀಮಾರಿ ಹಾಕಿದರೂ ಭಾರತದ ಮೇಲೆ ಸದಾ ದ್ವೇಷ ಕಾರುವ ಚೀನಾ ಮಾತ್ರ ನಾಯಿ ಬಾಲ ಡೊಂಕು ಎಂಬುದನ್ನು ಸಾಬೀತು ಪಡಿಸಿದೆ. ಕಾಶ್ಮೀರ ಸಮಸ್ಯೆ ಸೇರಿದಂತೆ ಪಾಕಿಸ್ತಾನದ ಯಾವುದೇ ಅಂತರಾಷ್ಟ್ರೀಯ ವಿಚಾರಗಳಲ್ಲಿ ಪಾಕ್‌ಗೆ ನಮ್ಮ ನೆರವು, ಸಂಪೂರ್ಣ ಬೆಂಬಲ ಸದಾ ಇರುತ್ತದೆ ಎಂದು ಚೀನಾ ಭರವಸೆ ನೀಡಿದೆ.
ಪಂಜಾಬ್ ಮುಖ್ಯಮಂತ್ರಿ ಶಹಬಾಜ್ ಶರೀಫ್ ಕಚೇರಿಯಿಂದ ಪ್ರಕಟವಾದ ಪತ್ರಿಕಾ ಪ್ರಕಟಣೆಯಲ್ಲಿ ಇದು ಸ್ಪಷ್ಟವಾಗಿದೆ.
ಚೀನಾದ ರಾಜತಾಂತ್ರಿಕ ಅಧಿಕಾರಿಗಳ ಜತೆ ಸಭೆ ನಡೆಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನ್ನಾಡುತ್ತಿದ್ದ ಶರೀಫ್, ಕಾಶ್ಮೀರ ಸಮಸ್ಯೆಗೆ ಸಂಬಂಧಿಸಿದಂತೆ ನಾವು ಪಾಕ್ ಪರ ಇದ್ದೇವೆ. ಕಾಶ್ಮೀರಿಗಳ ಆಕಾಂಕ್ಷೆಗಳಿಗನುಗುಣವಾಗಿ ಸಮಸ್ಯೆ ಬಗೆಹರಿಸಲ್ಪಡಬೇಕು ಎಂಬುದು ಬೀಜಿಂಗ್ ಆಶಯ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ