ಹೈದರಾಬಾದ್: ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿದ್ದ ಚಂದ್ರಬಾಬು ನಾಯ್ಡು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಸೋತು ಅಧಿಕಾರ ಕಳೆದುಕೊಂಡ ಬೆನ್ನಲ್ಲೇ ವಿಮಾನ ನಿಲ್ದಾಣದಲ್ಲೂ ಅವರಿಗೆ ರಾಜಾತಿಥ್ಯ ಸಿಗದೇ ಅವಮಾನ ಅನುಭವಿಸಿದ್ದಾರೆ.
ಗುನ್ನಾವರಂ ವಿಮಾನ ನಿಲ್ದಾಣಕ್ಕೆ ಬಂದ ಚಂದ್ರಬಾಬು ನಾಯ್ಡುರನ್ನು ಭದ್ರತಾ ಅಧಿಕಾರಿಗಳು ತಡೆಹಿಡಿದು ಸಾಮಾನ್ಯರಂತೇ ತಪಾಸಣೆ ನಡೆಸಿದ್ದಾರೆ. ಅಷ್ಟೇ ಅಲ್ಲದೆ, ಅವರಿಗೆ ವಿಮಾನ ನಿಲ್ದಾಣಕ್ಕೆ ವಿಐಪಿಗಳು ಬಳಸುವ ವಾಹನ ನೀಡಲು ನಿರಾಕರಿಸಿದ್ದಾರೆ. ಇದರಿಂದಾಗಿ ಚಂದ್ರಬಾಬು ನಾಯ್ಡು ಸಾಮಾನ್ಯರು ಬಳಸುವ ವಾಹನದಲ್ಲೇ ವಿಮಾನದತ್ತ ಸಾಗಬೇಕಾಯಿತು.
ಈ ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ತೆಲುಗು ದೇಶಂ ಪಕ್ಷ ಇದು ಬಿಜೆಪಿ ಮತ್ತು ಆಡಳಿತಾರೂಢ ವೈ ಎಸ್ ಆರ್ ಕಾಂಗ್ರೆಸ್ ನ ಷಡ್ಯಂತ್ರ. ವಿರೋಧ ಪಕ್ಷದ ನಾಯಕನಿಗೆ ಬೇಕೆಂದೇ ಅವಮಾನ ಮಾಡಲಾಗಿದೆ ಎಂದು ಆರೋಪಿಸಿದೆ.