Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಧನ್ಯಾ ರಾಜೇಂದ್ರನ್ಗೆ ಚಮೇಲಿದೇವಿ ಜೈನ್ ಪ್ರಶಸ್ತಿ

ಧನ್ಯಾ ರಾಜೇಂದ್ರನ್ಗೆ ಚಮೇಲಿದೇವಿ ಜೈನ್ ಪ್ರಶಸ್ತಿ
ನವದೆಹಲಿ , ಗುರುವಾರ, 23 ಮಾರ್ಚ್ 2023 (07:32 IST)
ನವದೆಹಲಿ : ‘ದಿ ನ್ಯೂಸ್ ಮಿನಿಟ್’ನ ಸಹ ಸಂಸ್ಥಾಪಕಿ ಹಾಗೂ ಸಂಪಾದಕಿ ಧನ್ಯಾ ರಾಜೇಂದ್ರನ್ ಅವರಿಗೆ 2022ರ ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಯಾಗಿ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
 
ಚಮೇಲಿ ದೇವಿ ಜೈನ್ ಪ್ರಶಸ್ತಿ ಭಾರತೀಯ ಪತ್ರಿಕೋದ್ಯಮದ ಪ್ರಶಸ್ತಿಯಾಗಿದ್ದು, ಇದನ್ನು ಅತ್ಯುತ್ತಮ ಮಹಿಳಾ ಮಾಧ್ಯಮ ಪ್ರತಿನಿಧಿಗಳಿಗಾಗಿ ನೀಡಲಾಗುತ್ತದೆ. ಭಾರತದ ಸ್ವಾತಂತ್ರ್ಯ ಹೋರಾಟಗಾರ್ತಿ ಚಮೇಲಿ ದೇವಿ ಜೈನ್ ಅವರ ಹೆಸರಿನಲ್ಲಿ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. ಚಮೇಲಿ ದೇವಿ ಭಾರತದ ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಜೈಲಿಗೆ ಹೋಗಿದ್ದ ಮೊದಲ ಜೈನ ಮಹಿಳೆಯಾಗಿದ್ದಾರೆ.

ಶಿಕ್ಷಣ ತಜ್ಞರಾದ ಪುರುಷೋತ್ತಮ್ ಅಗರ್ವಾಲ್ ಅವರು ಧನ್ಯಾ ಅವರಿಗೆ ಚಮೇಲಿ ದೇವಿ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಪ್ರಶಸ್ತಿ ಪಡೆದ ಬಳಿಕ ಮಾತನಾಡಿದ ಧನ್ಯಾ, ಈ ದೇಶದಲ್ಲಿ ಡಿಜಿಟಲ್ ಮಾಧ್ಯಮ ಸಂಸ್ಥೆಗಳು ಅತ್ಯಾಧುನಿಕ ಪತ್ರಿಕೋದ್ಯಮವನ್ನು ಹೇಗೆ ನಿರ್ಮಿಸುತ್ತಿದೆ ಹಾಗೂ ಅದಕ್ಕಾಗಿ ಕೆಲಸ ಮಾಡುತ್ತಿರುವವರು ಹೇಗೆ ಶೋಷಣೆಗೆ ಒಳಗಾಗುತ್ತಿದ್ದಾರೆ ಎಂಬುದರ ಕುರಿತು ಮಾತನಾಡಿದ್ದಾರೆ. 

Share this Story:

Follow Webdunia kannada

ಮುಂದಿನ ಸುದ್ದಿ

ಆಸ್ಪತ್ರೆ ಬಿಲ್ ನೋಡಿ ಯುವಕ ಆತ್ಮಹತ್ಯೆ