ಮುಸ್ಲಿಂ ಸಮುದಾಯದಲ್ಲಿ ಆಚರಣೆಯಲ್ಲಿರುವ ಮೂರು ಟ್ರಿಪಲ್ ತಲಾಖ್‌ಗೆ ವಿರೋಧ ವ್ಯಕ್ತ ಪಡಿಸಿ ಕೇಂದ್ರ ಸುಪ್ರೀಂ ಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದೆ.
ಮೂರು ಬಾರಿ ತಲಾಖ್ ಎಂದು ಹೇಳುವುದರ ಮೂಲಕ ಪತ್ನಿಯನ್ನು ತ್ಯಜಿಸುವ ರೀತಿ ಮುಸ್ಲಿಂ ಮಹಿಳೆಯರ ಗೌರವ ಮತ್ತು ಸಮಾನತೆಗೆ ಧಕ್ಕೆ ತರುತ್ತದೆ. ಈ ಪದ್ಧತಿಗೆ ನಮ್ಮ ನಮ್ಮ ವಿರೋಧವಿದೆ. ತಲಾಖ್ ಮತ್ತು ಬಹು ಪತ್ನಿತ್ವ ಇಸ್ಲಾಂ ಧರ್ಮದ ಅವಶ್ಯಕ ಅಂಗವೇನಲ್ಲ ಎಂದು ಕೇಂದ್ರ ಸುಪ್ರೀಂಕೋರ್ಟ್‌ನಲ್ಲಿ ತಿಳಿಸಿದೆ.
ಲಿಂಗ ಸಮಾನತೆ ಮತ್ತು ಮಹಿಳೆಯರ ಗೌರವಕ್ಕೆ ಸಂಬಂಧಿಸಿದಂತೆ ರಾಜಿ ಆಗುವ ಪ್ರಶ್ನೆಯೇ ಇಲ್ಲ ಎಂದು ಕೇಂದ್ರ ನ್ಯಾಯಾಲಯದಲ್ಲಿ ಪ್ರಮಾಣ ಪತ್ರ ಸಲ್ಲಿಸಿದೆ.
ಜಾತ್ಯಾತೀತ ದೇಶದಲ್ಲಿ ಇಂತಹ ಪದ್ಧತಿಗಳ ದುರುಪಯೋಗ ನಡೆಯುತ್ತಿದೆ. ಈ ರೀತಿಯ ಪದ್ಧತಿಗಳನ್ನು ಮುಸ್ಲಿಂ ಧರ್ಮದ ಭಾಗವಾಗಿ ಪರಿಗಣಿಸುವುದು ಅಸಾಧ್ಯ ಎಂದು ಕೋರ್ಟ್ ಸಹ ಹೇಳಿದೆ.
ಆದರೆ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ ಈ ವಿಚಾರದಲ್ಲಿ ಹಸ್ತಕ್ಷೇಪಿಸುವುದಕ್ಕೆ ವಿರೋಧ ವ್ಯಕ್ತ ಪಡಿಸಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ