ನವದೆಹಲಿ : ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ನೀಡಲಾಗಿದ್ದ ವಿಶೇಷ ಭದ್ರತೆ (ಎಸ್ ಪಿಜಿ) ವಾಪಾಸ್ ಪಡೆದಿರುವುದಾಗಿಗೃಹ ಸಚಿವಾಲಯ ಮಾಹಿತಿ ನೀಡಿದೆ.
ದೇಶದ ಪ್ರಮುಖ ಹುದ್ದೆಗಳಲ್ಲಿ ಇರುವ ಆಯ್ದ ಗಣ್ಯ ವ್ಯಕ್ತಿಗಳಿಗೆ ಎಸ್ಪಿಜಿ ಭದ್ರತೆ ಒದಗಿಸಲಾಗುತ್ತದೆ. ಎಸ್ ಪಿಜಿಯಲ್ಲಿ ಸುಮಾರು 3000 ಸಿಬ್ಬಂದಿಗಳಿದ್ದಾರೆ. ಪ್ರಾಣಕ್ಕೆ ಆಪತ್ತಿರುವ ಗಣ್ಯರಿಗೆ ಎಸ್ ಪಿಜಿ ಭದ್ರತೆ ಒದಗಿಸುತ್ತದೆ.ಹಾಗೇ ಅವರಿಗೆ ಇರುವ ಬೆದರಿಕೆಯ ಪ್ರಮಾಣ ಆಧರಿಸಿ ನಿಯತಕಾಲಿಕವಾಗಿ ಬದಲಾವಣೆ ಮಾಡಲಾಗುತ್ತದೆ.
ಈ ಕುರಿತು ಮಾಹಿತಿ ನೀಡಿರುವ ಗೃಹ ಸಚಿವಾಲಯ, ಈ ಬಾರಿ ಮರುಪರಿಶೀಲನೆ ಮಾಡಿದ ಸಂದರ್ಭ ಮನಮೋಹನ್ ಸಿಂಗ್ ಅವರಿಗೆ ಅಗತ್ಯವಿರುವ ಭದ್ರತೆ ಪ್ರಮಾಣದ ಮೌಲ್ಯಮಾಪನವನ್ನು ತಜ್ಞರು ಮಾಡಿದ್ದು, ಅದರ ಅನ್ವಯ ಅವರ ಭದ್ರತೆಯನ್ನು ಎಸ್ ಪಿಜಿ ಯಿಂದ Z+ ಗೆ ಇಳಿಸಲು ನಿರ್ಧರಿಸಲಾಗಿದೆ. ಇನ್ಮುಂದೆ ಮನಮೋಹನ್ ಸಿಂಗ್ ರಕ್ಷಣೆಗೆ ಸಿಆರ್ ಪಿಎಫ್ ಸಿಬ್ಬಂದಿ ನಿಯೋಜಿಸಲ್ಪಡುತ್ತಾರೆ ಎಂದು ತಿಳಿಸಿದೆ.