Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

18 ವರ್ಷದೊಳಗಿನ ಪತ್ನಿ ಜತೆ ಸೆಕ್ಸ್, ಅಪರಾಧವೇ?

18 ವರ್ಷದೊಳಗಿನ ಪತ್ನಿ ಜತೆ ಸೆಕ್ಸ್, ಅಪರಾಧವೇ?
ನವದೆಹಲಿ , ಶುಕ್ರವಾರ, 6 ಜನವರಿ 2017 (14:45 IST)
15 ವರ್ಷ ಮೇಲ್ಪಟ್ಟ, 18 ವರ್ಷದೊಳಗಿನ ಪ್ರಾಯದ ಪತ್ನಿ ಜತೆ ಲೈಂಗಿಕ ಸಂಪರ್ಕ ಹೊಂದುವುದು ಪೋಕ್ಸೋ ( ಲೈಂಗಿಕ ದೌರ್ಜನ್ಯದಿಂದ ಮಕ್ಕಳ ಹಿತರಕ್ಷಣಾ ಕಾಯ್ದೆ) ಕಾಯಿದೆಯ ಉಲ್ಲಂಘನೆಯಾಗುತ್ತದೆಯೇ? ಎಂದು ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಗುರುವಾರ ಪ್ರಶ್ನೆ ಹಾಕಿದೆ.
ಭಾರತೀಯ ದಂಡ ಸಂಹಿತೆ ವಿಭಾಗ 375ರ ಪ್ರಕಾರ, 15 ವರ್ಷ ದಾಟಿದ ಪತ್ನಿಯ ಜತೆ ಪತಿ ಲೈಂಗಿಕ ಸಂಪರ್ಕ ಹೊಂದುವುದು ಅತ್ಯಾಚಾರವೆಂದು ಪರಿಗಣಿತವಾಗುವುದಿಲ್ಲ.
 
ಆದರೆ ಪೋಸ್ಕೋ ಕಾಯಿದೆಯ ಸೆಕ್ಸನ್ 5 (n) 18 ವರ್ಷದೊಳಗಿನ ಬಾಲಕಿಯ ಜತೆ ಲೈಂಗಿಕ ಸಂಪರ್ಕ ಹೊಂದುವುದು ಶಿಕ್ಷಾರ್ಹ ಅಪರಾಧವೆನಿಸುತ್ತದೆ. 
 
ನೊಬೆಲ್ ಪುರಸ್ಕೃತ ಸಾಮಾಜಿಕ ಹೋರಾಟಗಾರ ಕೈಲಾಶ್ ಸತ್ಯಾರ್ಥಿ ಅವರು ನಡೆಸುತ್ತಿರುವ 'ಬಚಪನ್ ಬಚಾವೋ ಆಂದೋಲನ್' ಅಡಿಯಲ್ಲಿ ಎರಡು ಕಾನೂನುಗಳಲ್ಲಿರುವ ಈ ವೈರುಧ್ಯದ ಬಗ್ಗೆ ಸುಪ್ರೀಂ ಕೋರ್ಟ್ ಗಮನ ಸೆಳೆದಿತ್ತು. 
 
ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಜೆ. ಎಸ್. ಖೇಹರ್ ನೇತೃತ್ವದ ಪೀಠ, ಈ ಕುರಿತು ಪ್ರತಿಕ್ರಿಯಿಸಲು ಕೇಂದ್ರಕ್ಕೆ ನಾಲ್ಕು ತಿಂಗಳ ಕಾಲಾವಕಾಶ ನೀಡಿದೆ. 
 
1 ವರ್ಷದೊಳಗಿನ ಮಕ್ಕಳ ಮೇಲೆ ನಡೆಯುವ ಎಲ್ಲ ಲೈಂಗಿಕ ದೌರ್ಜನ್ಯಗಳಲ್ಲಿಯೂ ಪೋಕ್ಸೋ ಕಾಯಿದೆ ಅನ್ವಯವಾಗಬೇಕು. ಮಕ್ಕಳ ವೈವಾಹಿಕ ಸ್ಥಿತಿಯೂ ಇಲ್ಲಿ ಪರಿಗಣಿತವಾಗಬೇಕು, ಎಂಬುದು ಅರ್ಜಿದಾರರ ವಾದ.
 

Share this Story:

Follow Webdunia kannada

ಮುಂದಿನ ಸುದ್ದಿ

ಜಯಲಲಿತಾಗೆ "ಭಾರತ ರತ್ನ" ಅರ್ಜಿ ತಿರಸ್ಕರಿಸಿದ ಮದ್ರಾಸ್ ಹೈಕೋರ್ಟ್