Webdunia - Bharat's app for daily news and videos

Install App

ಬಿಎಸ್ಎಫ್ ಯೋಧನ ವಿಡಿಯೋ ಆರೋಪ; ತನಿಖೆಗೆ ಆದೇಶ

Webdunia
ಮಂಗಳವಾರ, 10 ಜನವರಿ 2017 (14:56 IST)
ಗಡಿ ಕಾಯುವ ಯೋಧರಿಗೆ ಕಳಪೆ ಗುಣಮಟ್ಟದ ಆಹಾರವನ್ನು ನೀಡಲಾಗುತ್ತದೆ ಎಂದು ಬಿಎಸ್ಎಫ್ ಯೋಧ ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲಾಗುವುದು ಎಂದು ಬಿಎಸ್​ಎಫ್ ಇನ್​ಸ್ಪೆಕ್ಟರ್ ಜನರಲ್ ಡಿ.ಕೆ. ಉಪಾಧ್ಯಾಯ ಮತ್ತು ಡಿಐಜಿ ಎಂಡಿಎಸ್ ಮಾನ್ ಮಂಗಳವಾರ ಸ್ಪಷ್ಟಪಡಿಸಿದ್ದಾರೆ.

 
ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಆರೋಪಕ್ಕೆ ಸಂಬಂಧಿಸಿದಂತೆ ಗಂಭೀರವಾಗಿ ತನಿಖೆ ನಡೆಸಲಾಗುವುದು. ಆರೋಪದಲ್ಲಿ ಹುರುಳಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ.
 
ಜತೆಗೆ ಕರ್ತವ್ಯ ನಿರತರಾಗಿದ್ದಾಗ ಮೊಬೈಲ್ ಇಟ್ಟುಕೊಳ್ಳುವುದು ನಿಯಮಬಾಹಿರ. ಈ ಕುರಿತು ಸಹ ತನಿಖೆ ನಡೆಸಲಾಗುವುದು. 
ನಿಷ್ಪಕ್ಷಪಾತ ತನಿಖೆಗಾಗಿ ಸೈನಿಕನನ್ನು ಬೇರೆ ಕೇಂದ್ರ ಕಚೇರಿಯಲ್ಲಿ ವಿಚಾರಣೆಗೊಳಪಡಿಸಲಾಗುವುದು ಎಂದಿದ್ದಾರೆ  ಡಿ.ಕೆ. ಉಪಾಧ್ಯಾಯ. 
 
ಬಿಎಸ್ಎಫ್ 29 ನೇ ಬೆಟಾಲಿಯನ್ ಯೋಧ ತೇಜ್ ಬಹಾದ್ದೂರ್ ಯಾದವ್ ತಮ್ಮ ಫೇಸ್‌ಬುಕ್ ಖಾತೆಯಲ್ಲಿ ತಮ್ಮ ದುಃಸ್ಥಿತಿಯನ್ನು ಬಿಚ್ಚಿಟ್ಟಿದ್ದು ಈ ವಿಡಿಯೋ ಈಗ ವೈರಲ್ ಆಗಿ ಹರಿದಾಡುತ್ತಿದೆ. 
 
ಬೆಳಗಿಂದ ಸಂಜೆಯವರೆಗೂ 11-12 ಗಂಟೆಗಳ ಕಾಲ ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ನಿರಂತರವಾಗಿ ಗಡಿ ಕಾಯುತ್ತೇವೆ. ಆದರೆ ನಮಗೆ ನೀಡುವ ಬೆಳಗಿನ ಉಪಹಾರ ಅರಿಶಿಣ ಮಿಶ್ರಿತ ದಾಲ್, ಒಣಗಿದ ಪರೋಟಾ. ನಮಗೆ ಸರಿಯಾದ ಆಹಾರ ಸಿಗುತ್ತಿಲ್ಲ. ಬೆಳಗಿನ ಉಪಹಾರಕ್ಕೆ ಸೀದು ಹೋಗಿರುವ ಆಹಾರವನ್ನು ನೀಡಲಾಗುತ್ತದೆ. ನಮಗೆ ಸಿಗುವ ರೇಷನ್‌ನಲ್ಲೂ ಮೇಲಾಧಿಕಾರಿಗಳ ಗೋಲ್ ಮಾಲ್ ಇರುತ್ತದೆ. ನಮ್ಮ ಪರಿಸ್ಥಿತಿ ಬಗ್ಗೆ ಯಾವುದೇ ಮಾಧ್ಯಮಗಳಲ್ಲಿ ತೋರಿಸಲಾಗುವುದಿಲ್ಲ, ಎಂದು ಸ್ಪೋಟಕ ಸತ್ಯವನ್ನು ಹೊರಹಾಕುವ ಧೈರ್ಯ ತೋರಿದ್ದಾನೆ ಸೈನಿಕ. ಈ ಕುರಿತು ಗಮನ ನೀಡುವಂತೆ ಅವರು ಪ್ರಧಾನಿ ಮೋದಿಯವರಲ್ಲಿ ಮನವಿ ಮಾಡಿದ್ದಾರೆ.
 
ಈ ಕುರಿತು ಪ್ರತಿಕ್ರಿಯಿಸಿರುವ ಬಿಎಸ್ಎಫ್ ಯಾದವ್ ಮದ್ಯವ್ಯಸನಿಯಾಗಿದ್ದು, ಅವರಿಗೆ ನಿಯಮಿತ ಆಪ್ತಸಮಾಲೋಚನೆ ಅಗತ್ಯವಿದೆ ಎಂದಿದೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments