ಮೀರತ್: ತಂಗಿಯ ಪ್ರೀತಿಯ ವಿಚಾರ ತಿಳಿದ ಅಣ್ಣ ಆಕೆಯ ಖಾಸಗಿ ಅಂಗಾಂಗಳಿಗೆ ಗುಂಡಿಕ್ಕಿ ಅಮಾನುಷವಾಗಿ ಕೊಲೆಗೈದ ಘಟನೆ ಮೀರತ್ ನಲ್ಲಿ ನಡೆದಿದೆ.
12 ನೇ ತರಗತಿ ಓದುತ್ತಿದ್ದ ಟೀನಾ ಚೌಧರಿ ಎಂಬಾಕೆ ಮೃತಪಟ್ಟವಳು. ಈಕೆ ಯುವಕನೊಬ್ಬನ ಜತೆ ಪ್ರೀತಿಯಲ್ಲಿ ಬಿದ್ದಿದ್ದಳು. ಆದರೆ ಈ ಸಂಬಂಧ ಮನೆಯವರಿಗೆ ಇಷ್ಟವಿರಲಿಲ್ಲ. ಆದರೆ ಮನೆಯವರ ಮಾತಿಗೆ ಸೊಪ್ಪು ಹಾಕದ ಟೀನಾ ಮೇಲೆ ಸಿಟ್ಟಿಗೆದ್ದ ಸಹೋದರ ಆಕೆಯ ತೊಡೆ, ಖಾಸಗಿ ಅಂಗಾಂಗಳು ಮತ್ತು ಬೆನ್ನಿನ ಭಾಗಕ್ಕೆ ಗುಂಡಿಕ್ಕಿ ಕೊಲೆಗೈದಿದ್ದಾನೆ ಎನ್ನಲಾಗಿದೆ. ಆಕೆಯ ಪ್ರಿಯಕರನ ಮುಂದೆಯೇ ಈ ಕೃತ್ಯವೆಸಗಲಾಗಿದೆ ಎನ್ನಲಾಗಿದೆ.
ಬಳಿಕ ಮನೆಯವರು ಸುಳ್ಳು ಕತೆ ಸೃಷ್ಟಿಸಿ ಪೊಲೀಸರ ದಾರಿ ತಪ್ಪಿಸಲು ಯತ್ನಿಸಿದ್ದಾರೆ. ಈ ಸಂಬಂಧ ಪೊಲೀಸರು ಮರ್ಯಾದಾ ಹತ್ಯೆ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.