ಲಂಡನ್‌ನಲ್ಲಿ ನೆಲೆಸಿದ್ದ ಪಾಕ್ ಯುವತಿಯೋರ್ವಳು ತನನ್ನು ಮದುವೆಯಾಗಿ ಕೈಕೊಟ್ಟಿದ್ದ ಕೇರಳಿಗ ಪತಿಯನ್ನು ಪತ್ತೆ ಹಚ್ಚಲು ಸಫಳಾಗಿದ್ದು, ಮತ್ತೀಗ ದ್ರೋಹಿ ಪತಿ ಜತೆ ಬದುಕಲು ಇಷ್ಟವಿಲ್ಲದೆ ಲಂಡನ್‌ಗೆ ಮರಳಿದ್ದಾಳೆ.
ಘಟನೆ ವಿವರ: ಕೇರಳದ ಚಾವಕ್ಕಾಡ್‌ನ ನೌಶಾದ್ ಹುಸೇನ್ ಎಂಬಿಎ ಮಾಡಲು ಲಂಡನ್‌ಗೆ ಹೋಗಿದ್ದ ಸಂದರ್ಭದಲ್ಲಿ ಪಾಕ್ ಮೂಲದ ಮರಿಯಂ ಖಾಲಿಕ್ ಎಂಬ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದ. ಏಪ್ರಿಲ್ 2013ರಲ್ಲಿ ಅವರಿಬ್ಬರ ಮದುವೆಯಾಗಿತ್ತು.
ಮದುವೆಯಾಗಿ ಒಂದು ವರ್ಷ ಆಕೆಯ ಜತೆ ಸಂಸಾರ ನಡೆಸಿದ್ದ ಆತ 2014ರಲ್ಲಿ ಆಕೆಯನ್ನು ಅಲ್ಲಿಯೇ ಬಿಟ್ಟು ಮನೆಗೆ ಮರಳಿದ್ದ. ತವರಿಗೆ ಬಂದ ಆರಂಭದ ದಿನಗಳಲ್ಲಿ ಆಕೆಗೆ ಫೋನ್ ಕರೆ ಮಾಡುತ್ತಿದ್ದ ಆತ ಬಳಿಕ ಆಕೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ. ಸ್ವಲ್ಪ ದಿನಗಳ ಬಳಿಕ ನಮ್ಮ ಮದುವೆಗೆ ಮನೆಯಲ್ಲಿ ಒಪ್ಪಿಗೆ ಇಲ್ಲ. ನಾನು ಲಂಡನ್‌ಗೆ ಮರಳುವುದಿಲ್ಲ ಎಂದು ಆಕೆಯನ್ನು ದೂರ ಮಾಡುತ್ತಿರುವುದಾಗಿ ತಿಳಿಸಿ ಫೋನ್ ಕರೆಯನ್ನು ನಿಲ್ಲಿಸಿದ. ಮರಳಿ ಬರುವೆ ಎಂದು ಹೇಳಿ ಹೋಗಿದ್ದ ಪತಿ ಸಂಪರ್ಕಕ್ಕೆ ಸಿಗದಾದಾಗ ಮರಿಯಂ ಹೌಹಾರಿ ಹೋದಳು. ಆದರೆ ಧೈರ್ಯಗೆಡಲಿಲ್ಲ. ನೇರವಾಗಿ ಕೇರಳಕ್ಕೆ ಬಂದಿಳಿದಳು.
2015ರಲ್ಲಿ ಮಲಪ್ಪುರಂಗೆ ಬಂದ ಆಕೆಗೆ ನೌಶಾದ್ ಪತ್ತೆಗೆ ಯಾರು ಕೂಡ ಸಹಕರಿಸಲಿಲ್ಲ. ಆಕೆ ಪಾಕ್ ಮೂಲದವಳಾಗಿದ್ದು ಸಹ ಯಹಾಯ ದೊರಕದಿರಲು ಕಾರಣವಾಯ್ತು. ಬಳಿಕ ಸ್ನೇಹಿತ ಎನ್ನುವ ಹೆಸರಿನ ಸ್ವಯಂ ಸೇವಾ ಸಂಸ್ಥೆ ಸಹಾಯದಿಂದ ಆತನನ್ನು ಪತ್ತೆ ಹಚ್ಚಲು ಆಕೆ ಸಫಲಳಾದಳು.
ಆತನನ್ನು ಮರಳಿ ಪಡೆಯಲು ಹೋರಾಟ ಮುಂದುವರೆಸಿದ ಮರಿಯಂನನ್ನು ಕೇರಳದಿಂದ ಓಡಿಸಲು ನೌಶಾದ್ ಪರಿವಾರದವರು ಬಹಳಷ್ಟು ಪ್ರಯತ್ನ ನಡೆಸಿದರು. ಈ ಮಧ್ಯೆ ನೌಶಾದ್ ಎರಡನೆಯ ಮದುವೆ ಕೂಡ ಆದ. ಎರಡು ವರ್ಷ ದೀರ್ಘ ಕಾಲ ಪತಿಯನ್ನು ಸೇರಲು ಕಾನೂನು ಹೋರಾಟ ನಡೆಸಿದ ಮರಿಯಂ ಮತ್ತೀಗ ವಿಚ್ಛೇದನ ಪಡೆದ ಹಿಂತಿರುಗಿದ್ದಾಳೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ