Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

100ಕ್ಕೂ ಅಧಿಕ ಜನರಿಂದ ಅತ್ಯಾಚಾರಕ್ಕೊಳಗಾಗಿದ್ದಾರೆನ್ನಲಾದ ಡೆಲ್ಲಿ ಮಾಡೆಲ್ ಪತ್ತೆಗೆ ಕೋರ್ಟ್ ಆದೇಶ

100ಕ್ಕೂ ಅಧಿಕ ಜನರಿಂದ ಅತ್ಯಾಚಾರಕ್ಕೊಳಗಾಗಿದ್ದಾರೆನ್ನಲಾದ ಡೆಲ್ಲಿ ಮಾಡೆಲ್ ಪತ್ತೆಗೆ ಕೋರ್ಟ್ ಆದೇಶ
bengaluru , ಗುರುವಾರ, 16 ಮಾರ್ಚ್ 2017 (13:17 IST)
ಪೊಲೀಸರು ಸೇರಿದಂತೆ 100ಕ್ಕೂ ಅಧಿಕ ಜನರಿಂದ ಅತ್ಯಾಚಾರ.. ನಿರಂತರ ಲೈಂಗಿಕ ದೌರ್ಜನ್ಯ ಹೀಗೊಂದು ಆರೋಪ ಮಾಡಿದ್ದ 24 ವರ್ಷದ ಮಾಡೆಲ್ ಮತ್ತು ನೇಪಾಳದ ಹದಿಹರೆಯದ ಯುವತಿ ನಿಗೂಢವಾಗಿ ನಾಪತ್ತೆಯಾಗಿದ್ದು, ಪತ್ತೆಗೆ ಬಾಂಬೆ ಹೈಕೋರ್ಟ್ ಪುಣೆ ಪೊಲೀಸರಿಗೆ ಅದೇಶಿಸಿದೆ.
 

ಆರೋಪಗಳು ತೀರಾ ಗಂಭೀರವಾಗಿವೆ. ಸಂತ್ರಸ್ತರ ಬಗ್ಗೆ ನ್ಯಾಯಾಲಯ ಕಳವಳಗೊಂಡಿದ್ದು, ಅವರ ಪತ್ತೆಗೆ ಗಂಭೀರ ಪ್ರಯತ್ನ ನಡೆಸಿ ಎಂದು ಜಸ್ಟೀಸ್ ರಂಜಿತ್ ಮೋರ್ ಮತ್ತು ರೇವತಿ ದೆರೆ ಅವರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಪ್ರಕರಣದ ಸಿಬಿಐ ತನಿಖೆಗೆ ಕೋರಿದ್ದ ಅಡ್ವೋಕೇಟ್ ಅರ್ಜುನ್ ಕಪೂರ್, 6 ತಿಂಗಳಿಂದ ಸಂತ್ರಸ್ತರು ನಾಪತ್ತೆಯಾಗಿದ್ದು, ಅತ್ಯಾಚಾರ ಆರೋಪಿಗಳ ಪಟ್ಟಿಯಲ್ಲಿ ಪೊಲೀಸರು ಇರುವುದರಿಂದ ಏನಾದರೂ ತೊಂದರೆಯಾಗಿರಬಹುದೆಂದು ಆತಂಕ ವ್ಯಕ್ತಪಡಿಸಿದ್ದರು.

ಇದೇವೇಳೆ, ತನಿಖಾಧಿಕಾರಿ ಕೋರ್ಟಿಗೆ ಹಾಜರಾಗದಿರುವ ಬಗ್ಗೆ ಮತ್ತು ಸಂತ್ರಸ್ತರು ತಮ್ಮ ದೂರಿನಲ್ಲಿ ಸೂಚಿಸಿದ್ದ ಪೊಲಿಸರು ವಕೀಲರಿಗೆ ಸೂಚನೆ ನೀಡುತ್ತಿದ್ದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೋರ್ಟ್, ಆಪಾದಿತರು ಡಿಫೆನ್ಸ್ ವಕೀಲರಿಗೆ ಸೂಚನೆ ನೀಡುವಂತಿಲ್ಲ ೆಂದು ತಾಕೀತು ಮ಻ಡಿದೆ.

ಇದೇವೇಳೆ, ಮಾರ್ಚ್ 31ರ ಮುಂದಿನ ವಿಚಾರಣೆ ವೇಳೆಗೆ ಕೋರ್ಟ್`ಗೆ ಹಾಜರಾಗುವಂತೆ ಪುಣೆ ಕಮೀಷನರ್, ಸರ್ಕಾರದ ಪರವಾಗಿ ಹಾಜರಾಗುವಂತೆ ಅಡ್ವೋಕೇಟ್ ಜನರಲ್ ಅವರಿಗೆ ಸೂಚಿಸಿದೆ.

 
ಮಾರ್ಚ್ 2016ರಂದು ನವದೆಹಲಿಯ ಮಾಡೆಲ್ ಸುಟ್ಟ ಗಾಯಗಳಿಂದ ಅಸ್ಪತ್ರೆಗೆ ದಾಖಲಾದಾಗ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಿತ್ತು. ಸಿನಿಮಾದಲ್ಲಿ ನಟನೆಯ ಚಾನ್ಸ್ ಕೊಡಿಸುವುದಾಗಿ ನನ್ನನ್ನು ಮನೆಗೆ ಕರೆಸಿದ್ದ ರೋಹಿತ್ ಭಂಡಾರಿ ತನ್ನ ಸಹಚರರೊಡನೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಬೆಂಕಿ ಹಚ್ಚಿದ ಎಂದು ಆರೋಪಿಸಿದ್ದಳು. ಜೊತೆಗೆ ತಾನು ಮತ್ತು ತನ್ನ ಜೊತೆ ನೇಪಾಳಿ ಯುವತಿಯೊಬ್ಬಳನ್ನ ಮುಂಬೈ, ಭೋಪಾಲ್, ಬೆಂಗಲೂರು ಸೇರಿದಂತೆ ಇತರೆಡೆ ಸುತ್ತಿಸಿ ನೂರಾರು ಜನರಿಂದ ಅತ್ಯಾಚಾರ ನಡೆಸಿದ್ದಾಗಿ ಹೇಳಿಕೊಂಡಿದ್ದಳು.

 

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನಸಭೆಯಲ್ಲಿ ಡೈರಿ ಗಲಾಟೆ: ಕಲಾಪ ಮುಂದೂಡಿಕೆ