Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಎಪಿ ಸೃಷ್ಟಿಸಿದ ಗೊಂದಲ: ಜನರ ಜತೆ ಸಂವಾದಕ್ಕೆ ಅಣ್ಣಾಗೆ ಬಿಜೆಪಿ ಆಗ್ರಹ

ಎಎಪಿ ಸೃಷ್ಟಿಸಿದ ಗೊಂದಲ:  ಜನರ ಜತೆ ಸಂವಾದಕ್ಕೆ ಅಣ್ಣಾಗೆ ಬಿಜೆಪಿ ಆಗ್ರಹ
ನವದೆಹಲಿ , ಬುಧವಾರ, 7 ಸೆಪ್ಟಂಬರ್ 2016 (18:40 IST)
ರಾಜಕೀಯ ರಂಗದಲ್ಲಿ ಆಮ್ ಆದ್ಮಿ ಸೃಷ್ಟಿಸಿದ ಗೊಂದಲದ ಸ್ಥಿತಿ ಬಗ್ಗೆ ಜಂತರ್‌ಮಂತರ್‌ನಲ್ಲಿ ಜನರ ಜತೆ ಸಂವಾದ ನಡೆಸಿ ರಾಷ್ಟ್ರಕ್ಕಾಗಿ ಮೇಲೇಳುವಂತೆ ಸಾಮಾಜಿಕ ಕಾರ್ಯಕರ್ತ ಅಣ್ಣಾ ಹಜಾರೆ ಅವರಿಗೆ ಬಿಜೆಪಿ ಒತ್ತಾಯಿಸಿದೆ.
 
ದೆಹಲಿಗೆ ಬಂದು ಜಂತರ್ ಮಂತರ್‌ನಿಂದ ಜನರ ಜತೆ ಮಾತನಾಡಿ. ಎಎಪಿಯ ಅನಾರೋಗ್ಯಕರ ರಾಜಕೀಯದ ಬಗ್ಗೆ ನಿಮಗೆ ಅನಿಸಿದ್ದನ್ನು ಹೇಳಿ. ಹಿಂದಿನ ಆಡಳಿತದಲ್ಲಿ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದ ರೀತಿಯಲ್ಲಿ ರಾಷ್ಟ್ರಕ್ಕೆ ಮಾರ್ಗದರ್ಶನ ನೀಡಿ ಎಂದು ಬಿಜೆಪಿ ದೆಹಲಿ ಘಟಕದ ಅಧ್ಯಕ್ಷ ಸತೀಶ್ ಉಪಾಧ್ಯಾಯ ಹಜಾರೆಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
 
ನಾವು ಜನಾಂದೋಳನ ದಿನಗಳಲ್ಲಿ ಭರವಸೆ ನೀಡಿದಂತೆ ಜನರು ಮುಖ್ಯಮಂತ್ರಿ ಕೇಜ್ರಿವಾಲ್ ಅವರಿಂದ ಪರಿಶುದ್ಧ ಆಡಳಿತ ನಿರೀಕ್ಷಿಸಿದ್ದಾರೆ. ಆದರೆ ಇಂದು ದೆಹಲಿ ನಾಚಿಕೆಪಡುವಂತಾಗಿದೆ. ದುರದೃಷ್ಟವಶಾತ್ ಅವರು ರಾಜಕೀಯ ವಾತಾವರಣವನ್ನು ಹದಗೆಡಿಸಿದ್ದಾರೆ ಎಂದು ಬಿಜೆಪಿ ನಾಯಕ ಹೇಳಿದರು. 
 
ಕೇಜ್ರಿವಾಲ್ ಉನ್ನತ ಸಿದ್ಧಾಂತಗಳನ್ನು ಆಶ್ರಯಿಸಿ ರಾಜಕೀಯ ವಾತಾವರಣದಲ್ಲಿ ಅಗತ್ಯವಾದ ಬದಲಾವಣೆ ತರುತ್ತಾರೆಂದು ಜನರು ಭಾವಿಸಿದ್ದರು. ಆದರೆ ಕೇಜ್ರಿವಾಲ್ ಸರ್ಕಾರದ ಆಡಳಿತದಿಂದ ಜನತೆ ಬೇಸತ್ತುಹೋಗಿದೆ ಎಂದು ಉಪಾಧ್ಯಾಯ ಹೇಳಿದ್ದಾರೆ. ಮೂವರು ಎಎಪಿ ಸಚಿವರನ್ನು ವಿವಿಧ ಆರೋಪಗಳ ಮೇಲೆ ವಜಾ ಮಾಡಿದ್ದನ್ನು ಕೂಡ ಉಪಾಧ್ಯಾಯ ಉಲ್ಲೇಖಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಬೀದಿಯಲ್ಲಿ ನಿಂತು ಹೋರಾಟ ಮಾಡಲು ಆಗಲ್ಲ: ಕುಮಾರಸ್ವಾಮಿ