ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಕೈರಾನಾ, ದಿಯೋಬಂದ್, ಮೊರ್ದಾಬಾದ್‌ನಲ್ಲಿ ಕರ್ಫ್ಯೂ ಹೇರುವುದಾಗಿ ಹೇಳುವ ಮೂಲಕ ಬಿಜೆಪಿ ಶಾಸಕ ಸುರೇಶ ರಾಣಾ ಬಹುದೊಡ್ಡ ವಿವಾದವನ್ನು ಮೈಗೆಳೆದುಕೊಂಡಿದ್ದಾರೆ.
ಮುಝಪ್ಫರ್‌ನಗರ ದಂಗೆಯ ಆರೋಪಿಗಳೊಬ್ಬನಾದ ರಾಣಾ, ಶಾಲ್ಮಿಯ ಠಾಣಾ ಭವನದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿದ್ದ ಸಂದರ್ಭದಲ್ಲಿ ಈ ಹೇಳಿಕೆಯನ್ನು ನೀಡಿದ್ದಾರೆ.
ತಾವಾಡಿದ ಮಾತುಗಳು ವಿವಾದವನ್ನು ಸೃಷ್ಟಿಸುತ್ತಿದೆ ಎಂಬುದು ಅರಿವಾಗುತ್ತಿದ್ದಂತೆ, ನನ್ನ ಮಾತಿನರ್ಥ, ಬಿಜೆಪಿ ಅಧಿಕಾರಕ್ಕೆ ಬಂದರೆ ಜನರು ಕೈರಾನಾ ಮತ್ತು ಇತರ ಸ್ಥಳಗಳಿಂದ ವಲಸೆ ಹೋಗಲು ಕಾರಣರಾದ ಗೂಂಡಾಗಳನ್ನು ಇಲ್ಲಿಂದ ಹೊರಹಾಕಲು ಒತ್ತಡ ತರುವುದು, ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಸಮಾಜವಾದಿ ಪಕ್ಷ ಗೂಂಡಾಗಳನ್ನು ಪೋಷಿಸುತ್ತಿದೆ ಎಂದು ಆರೋಪಿಸಿದ ಅವರು, ಅಮಾಯಕ ಜನರು ವಲಸೆ ಹೋಗಲು ಆಡಳಿತಾರೂಢ ಸರ್ಕಾರವೇ ಕಾರಣ ಎಂದಿದ್ದಾರೆ.