Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಅತ್ಯಾಚಾರ ಆರೋಪದಲ್ಲಿ ಬಿಜೆಪಿ ಶಾಸಕನ ಬಂಧನ

ಅತ್ಯಾಚಾರ ಆರೋಪದಲ್ಲಿ ಬಿಜೆಪಿ ಶಾಸಕನ ಬಂಧನ
ಡೆಹರಾಡೂನ್ , ಶನಿವಾರ, 30 ಜುಲೈ 2016 (14:02 IST)
ಮಹಿಳೆಯ ಮೇಲೆ ಎಸಗಿದ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರಾಖಂಡ್ ಪೊಲೀಸರು ಬಿಜೆಪಿ ಶಾಸಕನನ್ನು ಬಂಧಿಸಿದ್ದಾರೆ.
 
ವರದಿಗಳ ಪ್ರಕಾರ, ನವದೆಹಲಿಯ ಸಫ್ದರ್‌ಜಂಗ್ ಪೊಲೀಸ್ ಠಾಣೆಯಲ್ಲಿ 32 ವರ್ಷ ವಯಸ್ಸಿನ ಮಹಿಳೆಯೊಬ್ಬಳು ರಾವತ್ ವಿರುದ್ಧ ಅತ್ಯಾಚಾರ ಮತ್ತು ಲೈಂಗಿಕ ಕಿರುಕುಳ ದಾಖಲಿಸಿದ್ದಾಳೆ.
 
ಕಳೆದ ಎರಡು ವರ್ಷಗಳಿಂದ ಆರೋಪಿ ರಾವತ್ ನಿರಂತರವಾಗಿ ಅತ್ಯಾಚಾರವೆಸಗಿದ್ದಾನೆ ಎಂದು ಆಸ್ಸಾಂ ಮೂಲದ ಮಹಿಳೆ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ, ರಾವತ್‌ನನ್ನು ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. 
 
ಇದಕ್ಕಿಂತ ಮೊದಲು 2014ರಲ್ಲಿ  ಮತ್ತೊಬ್ಬ ಮಹಿಳೆ ಕೂಡಾ ಆರೋಪಿ ರಾವತ್ ವಿರುದ್ಧ ಅತ್ಯಾಚಾರದ ಪ್ರಕರಣ ದಾಖಲಿಸಿದ್ದಳು. ಎಫ್‌ಐಆರ್ ದಾಖಲಾಗಿದ್ದು ಇನ್ನೂ ತನಿಖೆ ಮುಂದುವರಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
 
ಮಾಜಿ ಸಿಎಂ ವಿಜಯ್ ಬಹುಗುಣ್ ಸಂಪುಟದಲ್ಲಿ ಕೃಷಿ ಖಾತೆ ಸಚಿವರಾಗಿದ್ದ ಹರಕ್ ಸಿಂಗ್ ರಾವತ್, ಹರೀಶ್ ರಾವತ್ ಸಂಪುಟದಲ್ಲೂ ಮುಂದುವರಿದಿದ್ದರು. ಆದರೆ, ಸಿಎಂ ಹರೀಶ್ ರಾವತ್ ವಿರುದ್ಧ ಬಂಡಾಯವೆದ್ದ ಹಿನ್ನೆಲೆಯಲ್ಲಿ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲಾಗಿತ್ತು.
 
ಕಾಂಗ್ರೆಸ್ ಪಕ್ಷದಿಂದ ಅಮಾನತ್ತುಗೊಂಡ ನಂತರ ಹರಕ್ ಸಿಂಗ್ ರಾವತ್ ಬಿಜೆಪಿ ಪಕ್ಷಕ್ಕೆ ಸೇರ್ಪಡೆಗೊಂಡಿದ್ದರು.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಮಹದಾಯಿ ಹೋರಾಟ: ಶಾಂತಿ ಕದಡಿದರೆ ಕಠಿಣ ಕ್ರಮ