ನವದೆಹಲಿ: ಇತ್ತೀಚೆಗಷ್ಟೇ ಹಿಂದೂಗಳ ಪೂಜನೀಯ ಪ್ರಾಣಿ ಗೋ ಹತ್ಯೆ ನಿಷೇಧಿಸಿ ದೇಶದಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಕೇಂದ್ರ ಸರ್ಕಾರಕ್ಕೆ ಮೋಮೋಸ್ ನಿಷೇಧಿಸಲು ಬಿಜೆಪಿ ಶಾಸಕರೊಬ್ಬರು ಆಗ್ರಹಿಸಿದ್ದಾರೆ.
ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ಜನಪ್ರಿಯವಾಗಿರುವ ಮೋಮೋಸ್ ಎಂಬುದು ಹಬೆಯಲ್ಲಿ ಬೇಯಿಸುವ ನೇಪಾಳ ಮೂಲದ ತಿನಿಸು. ರಸ್ತೆ ಬದಿಗಳಲ್ಲಿ ಸಿಗುವ ಈ ಆಹಾರ ವಸ್ತು ಪಾನಿ ಪುರಿ, ಮಸಾಲ್ ಪುರಿಯಂತೇ ಫೇಮಸ್.
ಆದರೆ ಇದಕ್ಕೆ ಆರೋಗ್ಯಕ್ಕೆ ಹಾನಿಕಾರಕವಾದ ಅಜಿನಮೊಟೊ ಹಾಕಲಾಗುತ್ತದೆ. ಇದು ಕರುಳಿನ ಕ್ಯಾನ್ಸರ್ ನಂತಹ ಗಂಭೀರ ಖಾಯಿಲೆ ತರುತ್ತದೆ. ಹಾಗಾಗಿ ಇದನ್ನು ನಿಷೇಧಿಸಬೇಕೆಂದು ಜಮ್ಮು-ಕಾಶ್ಮೀರದ ಶಾಸಕ ರಮೇಶ್ ಅರೋರಾ ಕೇಂದ್ರವನ್ನು ಆಗ್ರಹಿಸಿದ್ದಾರೆ.