ಲಕ್ನೋ : ಸಭೆಯೊಂದರಲ್ಲಿ ಉತ್ತರಪ್ರದೇಶದ ಬಿಜೆಪಿ ಸಂಸದ ಮತ್ತು ಶಾಸಕರು ಚಪ್ಪಲಿಯಲ್ಲಿ ಹೊಡೆದಾಡಿಕೊಂಡಿದ್ದು,ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ನಿನ್ನೆ ವಿವಿಧ ಯೋಜನೆ ಸಂಬಂಧ ಸಭೆಯನ್ನು ಆಯೋಜಿಸಿಲಾಗಿತ್ತು. ಈ ಸಭೆಗೆ ರಾಜಕೀಯ ನಾಯಕರುಗಳು ಹಾಗೂ ಮಾಧ್ಯಮದವರು ಆಗಮಿಸಿದ್ದರು. ಆ ವೇಳೆ ಸಂಸದ ಶರದ್ ತ್ರಿಪಾಠಿ, ನಾನು ಈ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದು ಶಂಕುಸ್ಥಾಪನಾ ಸಮಾರಂಭದ ವೇಳೆ ನನ್ನ ಹೆಸರನ್ನು ಕೈ ಬಿಟ್ಟಿದ್ದು ಯಾಕೆ ಎಂದು ಪ್ರಶ್ನೆ ಕೇಳಿದ್ದಾರೆ. ಇದಕ್ಕೆ ಶಾಸಕ ರಾಕೇಶ್ ಸಿಂಗ್ ಬಘೇಲ್ ಇದು ನನ್ನ ನಿರ್ಧಾರ ಎಂದು ಹೇಳಿದ್ದಾರೆ.
ಈ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಬಳಿಕ ಇದು ವಿಕೋಪಕ್ಕೆ ತಿರುಗಿ ಶರದ್ ತ್ರಿಪಾಠಿ ಚಪ್ಪಲಿ ತೆಗೆದುಕೊಂಡು ಬಘೇಲ್ ಗೆ ಹೊಡೆದಿದ್ದಾರೆ. ಇದರಿಂದ ರೊಚ್ಚಿಗೆದ್ದ ಬಘೇಲ್ ಅವರು ತ್ರಿಪಾಠಿ ಕುಳಿತ್ತಿದ್ದ ಸ್ಥಳಕ್ಕೆ ತೆರಳಿ ಹೊಡೆದಿದ್ದಾರೆ.
ಈ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಎಂಎನ್ ಪಾಂಡೆ ಪ್ರತಿಕ್ರಿಯಿಸಿ, ಇದು ನಿಜಕ್ಕೂ ಖಂಡನೀಯ. ಇಬ್ಬರನ್ನು ಲಕ್ನೋ ಬರುವಂತೆ ಸಮನ್ಸ್ ಜಾರಿ ಮಾಡಲಾಗಿದ್ದು, ಶಿಸ್ತು ಕ್ರಮವನ್ನು ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.