ಹರ್ಯಾಣ : ಹರ್ಯಾಣದ ವಿಧಾನಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ಬಾರದ ಹಿನ್ನಲೆಯಲ್ಲಿ ಇದೀಗ ಬಿಜೆಪಿ ಜೊತೆ ಜೆಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ನಿರ್ಧಾರ ಮಾಡಿದೆ.
ಶುಕ್ರವಾರ ರಾತ್ರಿ ಜೆಜೆಪಿ ಪಕ್ಷದ ಅಧ್ಯಕ್ಷ ದುಶ್ಯಂತ್ ಚೌಟಾಲಾ ಅವರು ಕೇಂದ್ರ ಸಚಿವ ಅಮಿತ್ ಶಾ ನಿವಾಸಕ್ಕೆ ಭೇಟಿ ನೀಡಿ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ಮಾತುಕತೆ ನಡೆಸಿದ್ದಾರೆ. ಬಳಿಕ ಜಂಟಿ ಸುದ್ದಿಗೋಷ್ಠಿ ನಡೆಸಿ ಮೈತ್ರಿ ಸರ್ಕಾರ ರಚಿಸುವ ಬಗ್ಗೆ ತಿಳಿಸಿದ್ದಾರೆ.
ಈ ವೇಳೆ ಮಾತನಾಡಿದ ಅಮಿತ್ ಶಾ, ಬಿಜೆಪಿ ಹಾಗೂ ಜೆಜೆಪಿ ಪಕ್ಷಗಳು ಸೇರಿ ಹರ್ಯಾಣದಲ್ಲಿ ಮೈತ್ರಿ ಸರ್ಕಾರ ರಚಿಸಲಿವೆ. ಈ ಮೂಲಕ ಬಿಜೆಪಿಗೆ ಸಿಎಂ ಸ್ಥಾನ, ಹಾಗೂ ಜೆಜೆಪಿಗೆ ಡಿಸಿಎಂ ಸ್ಥಾನ ಹಂಚಿಕೆಯಾಗಿದೆ. ಎರಡು ಪಕ್ಷಗಳು ಸೇರಿ ಹರ್ಯಾಣದ ಅಭಿವೃದ್ಧಿಗೆ ಶ್ರಮಿಸಲಿವೆ ಎಂದು ತಿಳಿಸಿದ್ದಾರೆ.