Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತ್ರಿಪುರಾ, ನಾಗಾಲ್ಯಾಂಡ್ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ

ತ್ರಿಪುರಾ, ನಾಗಾಲ್ಯಾಂಡ್ನಲ್ಲಿ ಮತ್ತೆ ಬಿಜೆಪಿಗೆ ಅಧಿಕಾರ
ನವದೆಹಲಿ , ಶುಕ್ರವಾರ, 3 ಮಾರ್ಚ್ 2023 (10:09 IST)
ನವದೆಹಲಿ : ಚುನಾವಣೋತ್ತರ ಸಮೀಕ್ಷೆಗಳಿಗೆ ಪೂರಕವಾಗಿಯೇ ಈಶಾನ್ಯ ರಾಜ್ಯಗಳ ಫಲಿತಾಂಶ ಹೊರಬಿದ್ದಿದ್ದು, ತ್ರಿಪುರ, ನಾಗಲ್ಯಾಂಡ್ನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ.
 
ಮೇಘಾಲಯದಲ್ಲಿ ಮಾತ್ರ ಸಿಎಂ ಕಾನ್ರಾಡ್ ಸಂಗ್ಮಾ ನೇತೃತ್ವದ ಎನ್ಪಿಪಿ ಹೆಚ್ಚು ಸ್ಥಾನ ಗಳಿಸಿದರೂ ಬಹುಮತ ಗಳಿಸುವಲ್ಲಿ ವಿಫಲವಾಗಿದೆ. ಅತಂತ್ರ ಫಲಿತಾಂಶ ಬಂದ ಹಿನ್ನೆಲೆಯಲ್ಲಿ ಕಾನ್ರಾಡ್ ಅವರು ಬೆಂಬಲ ಪಡೆಯಲು ಅಮಿತ್ ಶಾ ಜೊತೆ ಮಾತುಕತೆ ನಡೆಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಾಂತ ಬಿಸ್ವಾ ಶರ್ಮಾ  ಟ್ವೀಟ್ ಮಾಡಿ ಈ ವಿಚಾರ ತಿಳಿಸಿದ್ದಾರೆ.

ತ್ರಿಪುರಾದಲ್ಲಿ ಮಾತ್ರ ಬಿಜೆಪಿಗೆ ಅಂದುಕೊಂಡಷ್ಟು ಸುಲಭವಾಗಿ ಗೆಲುವು ದಕ್ಕಲಿಲ್ಲ. ಮಾಣಿಕ್ಯ ರಾಜವಂಶದ ಪ್ರದ್ಯೋತ್ ಬಿಕ್ರಮ್ ವರ್ಮಾ ನೇತೃತ್ವದ ತಿಪ್ರಾ ಮೋಥಾ ಪಕ್ಷ ಕೆಸರಿ ಪಡೆಗೆ ಭಾರೀ ಸ್ಪರ್ಧೆ ನೀಡಿತ್ತು. ಐಪಿಎಫ್ಟಿ ಜೊತೆಗೆ ಸ್ಪರ್ಧೆ ಮಾಡಿದ್ದ ಬಿಜೆಪಿ ಅಂತಿಮವಾಗಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಸಫಲವಾಯಿತು.

ತ್ರಿಪುರಾ 60 ಸ್ಥಾನ
ಬಿಜೆಪಿ + 33
ಎಡರಂಗ + 14
ಟಿಎಂಪಿ – 13
ನಾಗಾಲ್ಯಾಂಡ್ – 60 ಸ್ಥಾನ
ಬಿಜೆಪಿ+ಎನ್ಡಿಪಿಪಿ – 37
ಎನ್ಪಿಎಫ್ – 02
ಕಾಂಗ್ರೆಸ್ – 00
ಇತರರು – 21
ಮೇಘಾಲಯ 59 ಸ್ಥಾನ
ಎನ್ಪಿಪಿ -25
ಕಾಂಗ್ರೆಸ್ – 05
ಬಿಜೆಪಿ – 04
ಇತರರು – 25


Share this Story:

Follow Webdunia kannada

ಮುಂದಿನ ಸುದ್ದಿ

ಸರ್ಕಾರಿ ನೌಕರರಿಗೆ ಯುಎಸ್ ಸೂಚನೆ?