Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಬಿಜೆಪಿ ಘೋಷಣೆಗಳನ್ನು ಮಾತ್ರ ನೀಡಿದೆ, ರಾಹುಲ್ ಪ್ರಾಮಾಣಿಕL ಅಲ್ಪೇಶ್ ಠಾಕೂರ್

ಬಿಜೆಪಿ ಘೋಷಣೆಗಳನ್ನು ಮಾತ್ರ ನೀಡಿದೆ, ರಾಹುಲ್ ಪ್ರಾಮಾಣಿಕL ಅಲ್ಪೇಶ್ ಠಾಕೂರ್
ಗಾಂಧಿನಗರ್(ಗುಜರಾತ್) , ಸೋಮವಾರ, 23 ಅಕ್ಟೋಬರ್ 2017 (15:39 IST)
ಬಿಜೆಪಿ ಕೇವಲ ಘೋಷಣೆಗಳನ್ನು ನೀಡುತ್ತಿದೆ. ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ನಿಜವಾದ ಪ್ರಾಮಾಣಿಕ ನಾಯಕ ಎಂದು ನಿನ್ನೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಒಬಿಸಿ ಮುಖಂಡ ಅಲ್ಪೇಶ್ ಠಾಕೂರ್ ವಾಗ್ದಾಳಿ ನಡೆಸಿದ್ದಾರೆ.
ಬಿಜೆಪಿ ಪಕ್ಷ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ಸಮುದಾಯಗಳಿಗಾಗಿ ಘೋಷಣೆಗಳನ್ನು ಮಾತ್ರ ನೀಡಿದೆ. ಆದರೆ, ವಾಸ್ತವದಲ್ಲಿ ಯಾವುದೇ ಸಮುದಾಯಗಳಿಗೆ ಉಪಯೋಗವಾಗುವಂತಹ ಕಾರ್ಯ ಮಾಡಿಲ್ಲ. ರಾಹುಲ್ ಗಾಂಧಿ ಪ್ರಾಮಾಣಿಕರಾಗಿದ್ದು ಅವರ ಉದ್ದೇಶ ಶ್ರೇಷ್ಠವಾಗಿದೆ. ನಾವೆಲ್ಲರು ಒಂದಾಗಿ ಕಾರ್ಯನಿರ್ವಹಿಸೋಣ ಎಂದು ರಾಹುಲ್ ಭರವಸೆ ನೀಡಿದ್ದಾರೆ. ನಾವು ನೀಡುತ್ತಿರುವ ಬೆಂಬಲದ ಪ್ರತಿಫಲವಾಗಿ ಯಾವುದೇ ಹುದ್ದೆ, ಏನನ್ನೂ ಕೇಳಿಲ್ಲ ಎಂದು ತಿಳಿಸಿದ್ದಾರೆ. 
 
ಗಾಂಧಿ ಕುಟುಂಬದ ವಿರುದ್ಧದ ಎಲ್ಲಾ ಆರೋಪಗಳು ಆಧಾರರಹಿತವಾಗಿವೆ. ಬಿಜೆಪಿಯಲ್ಲಿರುವ ಭ್ರಷ್ಟಾಚಾರದ ಬಗ್ಗೆ ಜನತೆ ಯಾಕೆ ಚರ್ಚೆ ಮಾಡೋಲ್ಲ ಎಂದು ತಿರುಗೇಟು ನೀಡಿದ್ದಾರೆ.
 
ದೇಶದ ಆರ್ಥಿಕತೆಗೆ ಮಾರಕವಾಗಿರುವ ಜಿಎಸ್‌ಟಿ, ನೋಟು ನಿಷೇಧದಂತಹ ಮಹತ್ವದ ನಿರ್ಧಾರಗಳನ್ನು ಮೋದಿ ಸರಕಾರ ಅವಸರವಾಗಿ ತೆಗೆದುಕೊಂಡಿತು. ಬಿಜೆಪಿ ಆರೋಪಿಸುತ್ತಿದ್ದ ಎಲ್ಲಾ ಕಪ್ಪು ಹಣ ಶ್ವೇತ ಬಣ್ಣದಾಯಿತು. ಇದೀಗ ಉದ್ಯಮಿಗಳಿಗೆ ಇಂತಹ ಹೇಯ ನಿರ್ಧಾರದ ಅನುಭವವಾಗುತ್ತಿದೆ ಎಂದರು. 
 
ಡಿಸೆಂಬರ್‌ನಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಕೈಜೋಡಿಸುವಂತೆ ಕಾಂಗ್ರೆಸ್ ಪಕ್ಷ ಕರೆ ನೀಡಿದ ಕೆಲವೇ ಗಂಟೆಗಳಲ್ಲಿ ಠಾಕೂರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಹಾರ್ದಿಕ್ ಪಟೇಲ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವುದಿಲ್ಲ ಬೆಂಬಲ ನೀಡುತ್ತೇವೆ ಎಂದು ಹೇಳಿದ್ದರೆ, ಜಿಗ್ನೇಶ್ ಮೇವಾನಿ ಪ್ರತಿಕ್ರಿಯೆಗೆ ದೊರೆತಿಲ್ಲ ಎಂದು ಮೂಲಗಳು ತಿಳಿಸಿವೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ತಾಜ್‌ಮಹಲ್ ನಮ್ಮ ಸಂಸ್ಕ್ರತಿ, ಇತಿಹಾಸದ ಭಾಗ: ಸಿಎಂ ಯೋಗಿ