Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ನೋಟ್ ಬ್ಯಾನ್: ಬಿಜೆಪಿಯಲ್ಲಿ ಹೆಚ್ಚಿನವರು ಅವಿವಾಹಿತರಾಗಿದ್ದರಿಂದ ವಿವಾಹ ಸೀಜನ್‌ ಮರೆತಿದ್ದಾರೆ: ಬಾಬಾ ರಾಮದೇವ್

ನೋಟ್ ಬ್ಯಾನ್: ಬಿಜೆಪಿಯಲ್ಲಿ ಹೆಚ್ಚಿನವರು ಅವಿವಾಹಿತರಾಗಿದ್ದರಿಂದ ವಿವಾಹ ಸೀಜನ್‌ ಮರೆತಿದ್ದಾರೆ: ಬಾಬಾ ರಾಮದೇವ್
ನವದೆಹಲಿ , ಶುಕ್ರವಾರ, 18 ನವೆಂಬರ್ 2016 (14:32 IST)
ಬಿಜೆಪಿ ಪಕ್ಷದಲ್ಲಿ ಅನೇಕರು ಅವಿವಾಹಿತರಾಗಿರುವುದರಿಂದ ಪ್ರಸ್ತುತ ವಿವಾಹ ಸೀಜನ್‌ ಎನ್ನುವುದು ಅರಿವಿಗೆ ಬಂದಿಲ್ಲ. ನೋಟ್ ಬ್ಯಾನ್ ಅವರು ಮಾಡಿದ ದೊಡ್ಡ ತಪ್ಪಾಗಿದೆ ಎಂದು ಯೋಗ ಗುರು ಬಾಬಾ ರಾಮದೇವ್ ಹೇಳಿದ್ದಾರೆ.  
 
ವಿವಾಹದ ಸೀಜನ್‌ನಲ್ಲಿ ಕೇಂದ್ರ ಸರಕಾರ 500 ಮತ್ತು 1000 ರೂ. ನೋಟುಗಳಿಗೆ ನಿಷೇಧ ಹೇರಿರುವುದು ಸಾವಿರಾರು ಕುಟುಂಬಗಳನ್ನು ಆತಂಕಕ್ಕೆ ತಳ್ಳಿದೆ. ಇದೀಗ ಕೇಂದ್ರ ಸರಕಾರ ವಿವಾಹ ನೆರವೇರಿಸುತ್ತಿರುವ ಕುಟುಂಬಗಳು 2.5 ಲಕ್ಷ ಹಣವನ್ನು ಪಡೆಯಲು ಅವಕಾಶ ನೀಡಿದೆ.
 
ಒಂದು ವೇಳೆ, ಕೇಂದ್ರ ಸರಕಾರ 15 ದಿನಗಳು ಅಥವಾ ಒಂದು ತಿಂಗಳ ನಂತರ ನೋಟ್ ಬ್ಯಾನ್‌ ಹೇರುತ್ತಿದ್ದಲ್ಲಿ ವಿವಾಹ ಕಾರ್ಯಕ್ರಮಗಳಿಗೆ ಸಿದ್ದವಾಗಿರುವ ಕುಟುಂಬಗಳಿಗೆ ತೊಂದರೆಯಾಗುತ್ತಿರಲಿಲ್ಲ. ಒಂದು ರೀತಿಯಲ್ಲಿ ನೋಟ್ ಬ್ಯಾನ್ ಮಾಡಿರುವುದು ಒಳ್ಳೆಯದೇ ಆಯಿತು ವರದಕ್ಷಿಣೆ ಕೇಳುವುದಿಲ್ಲ ಎಂದು ಜೋಕ್ ಕಟ್ ಮಾಡಿದ್ದಾರೆ.
 
ಕಪ್ಪು ಹಣ ಮತ್ತು ತೆರಿಗೆ ವಂಚಿತ ಹಣವನ್ನು ನಿಯಂತ್ರಿಸಲು ಕೇಂದ್ರ ಸರಕಾರ 500 ಮತ್ತು 1000 ರೂ.ನೋಟು ನಿಷೇಧಕ್ಕೆ ಮುಂದಾಗಿದ್ದರಿಂದ ದೇಶದಲ್ಲಿ ಶೇ.85 ರಷ್ಟು ಹಣ ಒಂದೇ ಬಾರಿಗೆ ಹಿಂಪಡೆದಂತಾಗಿದೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳುಗಳಲ್ಲಿ ಹೆಚ್ಚಿನ ವಿವಾಹ ಕಾರ್ಯಕ್ರಮಗಳು ನಡೆಯುತ್ತವೆ.
 
ವಿವಾಹ ಮಾಡಿಕೊಳ್ಳುವ ವಧು, ವರ ಅಥವಾ ಅವರ ಪೋಷಕರು ಬ್ಯಾಂಕ್‌ನಿಂದ 2.50 ಲಕ್ಷ ಹಣವನ್ನು ಹಿಂಪಡೆಯಬಹುದಾಗಿದೆ ಎಂದು ಆರ್ಥಿಕ ವ್ಯವಹಾರ ಸಚಿವಾಲಯದ ಕಾರ್ಯದರ್ಶಿ ಶಕ್ತಿಕಾಂತಾ ದಾಸ್ ಈಗಾಗಲೇ ಸ್ಪಷ್ಟಪಡಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಹತ್ಯೆ ಆರೋಪ: ಮಾಜಿ ಕಾರ್ಪೋರೇಟರ್ ಬಂಧನ