ಪ್ರಧಾನಿ ಮೋದಿ ಸರಕಾರ ಎರಡು ವರ್ಷಗಳ ಅಧಿಕಾರವಧಿಯನ್ನು ಪೂರೈಸಿದೆ. ಅಧಿಕಾರರೂಡ ಬಿಜೆಪಿ ಪಕ್ಷ ದೇಶಾದ್ಯಂತ ಭಾರಿ ಪ್ರಮಾಣದಲ್ಲಿ ಸಂಭ್ರಮಾಚರಣೆ ನಡೆಸಲು ನಿರ್ಧರಿಸಿದೆ.
ಪ್ರಧಾನಿ ಮೋದಿ ಸಂಪುಟದಲ್ಲಿ ಸಮರ್ಥ ಸಚಿವರ ಯಾರು ಎನ್ನುವ ಬಗ್ಗೆ ನಡೆದ ಸಮೀಕ್ಷೆಯಲ್ಲಿ ಕೇಂದ್ರ ಸಾರಿಗೆ ಖಾತೆ ಸಚಿವ ನಿತೀನ್ ಗಡ್ಕರಿ, ಅತ್ಯಂತ ಸಮರ್ಥ ಸಚಿವ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ, ನಂತರದ ಸ್ಥಾನವನ್ನು ಪಿಯೂಷ್ ಗೋಯಲ್ ಮತ್ತು ಮನೋಹರ್ ಪರಿಕ್ಕರ್ ಸ್ಥಾನ ಪಡೆದಿದ್ದಾರೆ.
ಕೇಂದ್ರ ರೈಲ್ವೆ ಖಾತೆ ಸಚಿವ ಸುರೇಶ್ ಪ್ರಭು ನಾಲ್ಕನೇ ಸ್ಥಾನವನ್ನು ಪಡೆದಿದ್ದರೆ, ಅರುಣ್ ಜೇಟ್ಲಿ ಐದನೇ ಸ್ಥಾನವನ್ನು ಪಡೆದಿದ್ದಾರೆ.
ಎನ್‌ಡಿಎ ಸರಕಾರದ ಸ್ಟಾರ್ಟ್ ಅಪ್ ಇಂಡಿಯಾ, ಸಿಂಗಲ್ ವಿಂಡೋ ಕ್ಲಿಯರೆನ್ಸ್ ಮತ್ತು ಬ್ಯಾಂಕಿಂಗ್ ಸುಧಾರಣೆಗಳು ಉದ್ಯಮಿಗಳ ಮೆಚ್ಚುಗೆಗೆ ಪಾತ್ರವಾಗಿವೆ ಎನ್ನಲಾಗಿದೆ.
ಆದಾಗ್ಯೂ, ಎನ್‌ಡಿಎ ಸರಕಾರ ಸಂಸತ್ತಿನಲ್ಲಿ ಜಿಎಸ್‌ಟಿ ಮಸೂದೆ ಅಂಗೀಕಾರ ಮಾಡುವಲ್ಲಿ ವಿಫಲವಾಗಿರುವುದು ದುರದೃಷ್ಟಕರ ಸಂಗತಿ ಎಂದು ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಸಾರ್ವಜನಿಕ ಕ್ಷೇತ್ರಗಳಲ್ಲಿ ಹೂಡಿಕೆ, ಕಾರ್ಮಿಕ ಸುಧಾರಣೆ ನೀತಿಗಳು ಮತ್ತು ರೈಲ್ವೆ ಖಾಸಗಿಕರಣ ಕ್ಷೇತ್ರಗಳಲಲಿನ ವೈಫಲ್ಯಗಳು ಎನ್‌ಡಿಎ ಸರಕಾರಕ್ಕೆ ನಿರಾಶಾದಾಯಕವಾಗಿವೆ ಎಂದು ಸಮೀಕ್ಷಾ ವರದಿಯಲ್ಲಿ ಬಹಿರಂಗವಾಗಿದೆ.
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.